’ಬಜೆಟ್​ನಲ್ಲಿ ಮಧ್ಯ-ಉತ್ತರ ಕರ್ನಾಟಕವನ್ನ ಸಿಎಂ ಕುಮಾರಸ್ವಾಮಿ ಕಡೆಗಣಿಸಿದ್ದಾರೆ’

ದಾವಣಗೆರೆ: ಬಜೆಟ್​ನಲ್ಲಿ ಮಧ್ಯ ಮತ್ತು ಉತ್ತರ ಕರ್ನಾಟಕವನ್ನ ಸಿಎಂ ಕುಮಾರಸ್ವಾಮಿ ಕಡೆಗಣೆಸಿದ್ದಾರೆ. ಈ  ಬಜೆಟ್ ಕೇವಲ ಐದು ಜಿಲ್ಲೆಗಳಿಗೆ ಸಂಬಂಧಪಟ್ಟ ಬಜೆಟ್ ಎಂದು ಶಾಸಕ ಶ್ರೀರಾಮಲು ಹೇಳಿದ್ದಾರೆ.

ಜಿಲ್ಲೆಯ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಬಿಜೆಪಿ ಶಾಸಕ ಶ್ರೀರಾಮಲು ಮಾತನಾಡಿ, ಬಜೆಟ್​ನಲ್ಲಿ ಎಸ್​ಸಿ ಮತ್ತು ಎಸ್​ಟಿ ಜನರಿಗೆ ಈ ಹಿಂದೆ ಕೊಡ್ತಾ ಇದ್ದ ಅನುದಾನ ಕಟ್  ಮಾಡಿದ್ದಾರೆ. ಎಸ್​ಸಿ ಮತ್ತು ಎಸ್​ಟಿ  ಜನರಿಗೆ ಬರುವ ಅನುದಾನ ಬೇರೆ ಕಡೆ ಬಳಕೆ ಮಾಡ್ತಿದಾರೆ ಎಂದು ಶ್ರೀರಾಮಲು ಆರೋಪಿಸಿದರು. ಅತೃಪ್ತ ಶಾಸಕರನ್ನು ಇದುವರೆಗೆ ನಾವು ಸಂಪರ್ಕಿಸಿಲ್ಲ. ಬೋಗಸ್​  ಆಡಿಯೋವನ್ನ ಸಿಎಂ ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ್ದಾರೆ. ಇನ್ನು ರೈತರ ಸಂಪೂರ್ಣ ಸಾಲಮನ್ನಾ ಬಗ್ಗೆ  ಸರ್ಕಾರ ಸ್ಪಷ್ಟೀಕರಣ ಕೊಟ್ಟಿಲ್ಲ. ಅಸಮಾಧಾನದಿಂದ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡಿದ್ದಾರೆ. ದೋಸ್ತಿ ಸರಕಾರದ ಬಜೆಟ್ ಸಂಪೂರ್ಣ ಫೇಲ್ ಆಗಿದೆ ಎಂದು ಶ್ರೀರಾಮಲು ಹೇಳಿದರು.

ಸಿಎಂ ಕುಮಾರಸ್ವಾಮಿ ಬೋಗಸ್​  ಆಡಿಯೋವನ್ನ ಬಿಡುಗಡೆ ಮಾಡಿದ್ದಾರೆ
ಸಿಎಂ ಕುಮಾರಸ್ವಾಮಿ ಆಡಿಯೋ ರಿಲೀಸ್ ಮಾಡಿರುವ ಕುರಿತು ಪ್ರತಿಕ್ರಿಯಿಸಿ, ಸಿಎಂ ಕುಮಾರಸ್ವಾಮಿ ಮೂಲತಃ ಸಿನೆಮಾದಿಂದ ನಿರ್ಮಾಣ ಬಂದವರು. ಡಬ್ಬಿಂಗ್, ವೈಸ್ ರೇಕಾರ್ಡ್ ಮಾಡೋದ್ರಲ್ಲಿ ಸಿಎಂ ನಿಸ್ಸೀಮರು. ಹೀಗಾಗಿ ಸಿಎಂ ಈ ರೀತಿ ಮಾಡಿದ್ದಾರೆ. ಇನ್ನ, ಮಾಜಿ ಸಿಎಂ ಸಿದ್ದರಾಮಯ್ಯನವರು ಏನ್ ರಿಲೀಸ್ ಮಾಡ್ತಾರೆ ಮಾಡ್ಲಿ ಎಂದು ಶಾಸಕ ಶ್ರೀರಾಮಲು ಹೇಳಿದರು.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv