‘ಸಿಎಂ’ ಬಾಡೂಟಕ್ಕೆ ಅಧಿಕಾರಿಗಳ ಬ್ರೇಕ್

ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯರಿಗೆ ಬಾಡೂಟ ಮಿಸ್​ ಆಗಿದೆ. ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೆ ಸಿಎಂ ತಮ್ಮ ಸರ್ಕಾರಿ ಕಾರನ್ನ ಬಿಟ್ಟು ಖಾಸಗಿ ಕಾರಿನಲ್ಲಿ ತೆರಳಿದ್ದರು. ಇದಾದ ಬಳಿಕ ಅವರು ಕೆವಿ ನಾಗರಾಜ್​ರನ್ನ ಪಕ್ಷಕ್ಕೆ ಬರಮಾಡಿಕೊಳ್ಳಲು ತೆರಳಿದ್ದರು. ಕೋಚಿಮುಲ್​ನ ನಿರ್ದೇಶಕ ಹಾಗೂ ಜೆಡಿಎಸ್ ಮಾಜಿ ಜಿಲ್ಲಾಧ್ಯಕ್ಷರಾಗಿದ್ದ ಕೆ.ವಿ.ನಾಗರಾಜ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಸಮ್ಮುಖದಲ್ಲಿ ನಾಗರಾಜ್ ಪಕ್ಷ ಸೇರಿಕೊಂಡ್ರು. ಇನ್ನೂ ಈ ಹಿನ್ನೆಲೆಯಲ್ಲಿ ಕಣಜೇನಹಳ್ಳಿ ಗ್ರಾಮದಲ್ಲಿ ಸುಮಾರು 3ಸಾವಿರ ಮಂದಿಗೆ ಬಾಡೂಟ ಆಯೋಜನೆ ಮಾಡಲಾಗಿತ್ತು. ಆದರೆ, ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಧಿಕಾರಿಗಳು ಬಾಡೂಟವನ್ನು ವಶಕ್ಕೆ ಪಡೆದಿದ್ದಾರೆ. ಸಿಎಂ ಕೆ.ವಿ.ನಾಗರಾಜ್ ಮನೆಯಿಂದ ವಾಪಸ್ಸಾಗುತ್ತಿದ್ದಂತೆಯೇ ಅಧಿಕಾರಿಗಳು ಬಾಡೂಟವನ್ನು ಜಪ್ತಿ ಮಾಡಿದ್ದಾರೆ.

Leave a Reply

Your email address will not be published. Required fields are marked *