2018 ಬಡ್ತಿ ಮೀಸಲಾತಿ ಕಾಯ್ದೆ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ

ಕಾರವಾರ: ಬಡ್ತಿ ಮೀಸಲಾತಿ ಕಾಯ್ದೆ- 2018 ಅನ್ನು ಜಾರಿಗೊಳಿಸದಂತೆ ಉತ್ತರಕನ್ನಡ ಜಿಲ್ಲಾ ಅಹಿಂಸಾ ಘಟಕ ಇಂದು ಪ್ರತಿಭಟನೆ ನಡೆಸಿತು. ಕರ್ನಾಟಕ ಸರ್ಕಾರ 1978ರಲ್ಲಿ ಬಡ್ತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಜಾರಿ ಮಾಡಿತ್ತು. ಈ ನೀತಿಯಿಂದ ಶೇಕಡಾ 82ನೌಕರ ವರ್ಗದವರಿಗೆ ಅನ್ಯಾಯವಾಗುತ್ತಾ ಬಂತು. 2017 ರಲ್ಲಿ ಸುಪ್ರೀಂ ಕೋರ್ಟ ಈ ನೀತಿಯನ್ನು ತಡೆ ಹಿಡಿದಿತ್ತು. ಆದರೆ ರಾಜ್ಯ ಸರ್ಕಾರ ಕೋರ್ಟ್ ಆದೇಶವನ್ನು ಅಸಿಂಧುಗೋಳಿಸಲು ಬಡ್ತಿ ಮೀಸಲಾತಿ ಕಾಯ್ದೆ 2018 ನ್ನು ಜಾರಿ ಮಾಡಲು ಮುಂದಾಗುತ್ತಿದೆ. ಇದರಿಂದ ಶೇ.82ವರ್ಗದ ನೌಕರಸ್ಥರಿಗೆ ಅನ್ಯಾಯವಾಗುತ್ತಿದೆ ಎಂದು ಇಂದು ಅಹಿಂಸಾ ಸಂಘಟಕರು ಜಿಲ್ಲಾಧಿಕಾರಿ ಕಛೇರಿ ಮುಂದೆ ದರಣಿ ನಡೆಸಿದರು. ನಂತರ ಅಪರ ಜಿಲ್ಲಾಧಿಕಾರಿ ಸುರೇಶ ಹಿಟ್ನಾಳ ಅವರ ಮೂಲಕ ಸರ್ಕಾರಕ್ಕೆ ಬಡ್ತಿ ಮೀಸಲಾತಿ ಕಾಯ್ದೆ -2018 ಜಾರಿಗೊಳಿಸದಂತೆ ಮನವಿ ಸಲ್ಲಿಸಿದರು.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv