ಕೇಜ್ರಿವಾಲ್​ಗೆ ಮತ್ತೆ ಕಾನೂನಿನ ಸಂಕಷ್ಟ..!

ದೆಹಲಿ: ಏನೇ ಮಾಡಿದರೂ, ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಕಾನೂನಿನ ಸಂಕಷ್ಟಗಳು ಮುಗಿಯುವ ಲಕ್ಷಣ ಕಾಣ್ತಿಲ್ಲ. ಇದೀಗ ಅವರ ವಿರುದ್ಧ ಮತ್ತೊಂದು ಜಾಮೀನು ರಹಿತ ವಾರಂಟ್​ ಹೊರಬಿದ್ದಿದೆ. ಅವರ ಜೊತೆ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಹಾಗೂ ಯೋಗೇಂದ್ರ ಯಾದವ್​ ವಿರುದ್ಧವೂ ವಾರಂಜ್​ ಜಾರಿಯಾಗಿದೆ. 2013 ರಲ್ಲಿ ವಕೀಲ ಸುರೇಂದ್ರ ಕುಮಾರ್ ಶರ್ಮಾ ಸಲ್ಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವಾರಂಟ್​ನ್ನ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಿನ್​ ಮ್ಯಾಜಿಸ್ಟ್ರೇಟ್​ ಸಮರ್​ ವಿಶಾಲ್​ ಜಾರಿ ಮಾಡಿದ್ದಾರೆ. ಎಷ್ಟು ಸಲ ವಿಚಾರಣೆಗೆ ಕರೆದರೂ ಹಾಜರಾಗದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಲಾಗಿದೆ. ಈ ಸಂಬಂಧ ಇವತ್ತು ಅರವಿಂದ್ ಕೇಜ್ರಿವಾಲ್​ ಕೋರ್ಟ್​ಗೆ ಹಾಜರಾಗಲೇ ಬೇಕಿದೆ. ಒಂದು ವೇಳೆ ಹಾಜರಾಗದಿದ್ದರೇ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

2013 ರಲ್ಲಿ ಸುರೇಂದ್ರ ಕುಮಾರ್​ ಶರ್ಮಾರಿಗೆ ದೆಹಲಿ ವಿಧಾನಸಭಾ ಚುನಾವಣಾ ಕಣದಲ್ಲಿ ಸ್ಪರ್ಧಿಸುವಂತೆ ಯೋಗೇಂದ್ರ ಯಾದವ್​ ಹಾಗೂ ಸಿಸೋಡಿಯಾ ಸೂಚಿಸಿದ್ರು. ಅದರಂತೆ ಶರ್ಮಾ ಕೂಡ ನಾಮಪತ್ರ ಸಲ್ಲಿಸಿದ್ರು. ಆದರೆ ತದನಂತರ ಆಮ್​ ಆದ್ಮಿ ಪಕ್ಷ ಶರ್ಮಾರಿಗೆ ಟಿಕೆಟ್ ನಿರಾಕರಿಸಿತ್ತು. ಇದಾದ ಬಳಿಕ ಅರವಿಂದ್ ಕೇಜ್ರಿವಾಲ್​ ಸೇರಿದಂತೆ ಮೂವರು ಪತ್ರಿಕೆಗಳಲ್ಲಿ ತಮ್ಮ ವಿರುದ್ಧ ಮಾನನಷ್ಟ ಹೇಳಿಕೆಗಳನ್ನು ನೀಡಿದ್ದಾರೆ ಅಂತಾ ಆರೋಪಿಸಿ ಅಕ್ಟೋಬರ್​ 14 ರಂದು ಮಾನನಷ್ಟ ಕೇಸ್​ನ್ನ ದಾಖಲಿಸಿದ್ರು. ಈ ಸಂಬಂಧ ಕೋರ್ಟ್​ ಮೂವರಿಗೆ ಹಾಜರಾಗುವಂತೆ ಹಲವು ಸಲ ನೋಟಿಸ್​ ನೀಡಿತ್ತು.

Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv