ಗೌರಿ ಹಂತಕನ ಬಂಧನ ಕುರಿತು ನನಗೆ ಯಾರೂ ಹೇಳಿಲ್ಲ- ಎಂ.ಎಂ.‌ಕಲಬುರ್ಗಿ ಪತ್ನಿ ಉಮಾದೇವಿ

ಧಾರವಾಡ: ಗೌರಿ ಲಂಕೇಶ್ ಹಂತಕ‌ನ ಬಂಧನ ಕುರಿತಾಗಿ ಯಾರೂ ನನಗೆ ಮಾಹಿತಿ ನೀಡಿಲ್ಲ ಎಂದು ವಿಚಾರವಾದಿ ಎಂ.ಎಂ.‌ಕಲಬುರ್ಗಿ ಪತ್ನಿ ಉಮಾದೇವಿ ಹೇಳಿದ್ದಾರೆ.
ಧಾರವಾಡ ನಿವಾಸದಲ್ಲಿ‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪತಿ ಹತ್ಯೆ ವೇಳೆ ಗೃಹ ಮಂತ್ರಿ ಇದ್ದ ಪರಮೇಶ್ವರ ಅವರೇ ಗೃಹ ಮಂತ್ರಿ ಯಾಗಿದ್ದಾರೆ. ಈಗ ಹೊಸ ಸರ್ಕಾರ ಬಂದಿದೆ ಹೀಗಾಗಿ ಈಗಿನ ಸರ್ಕಾರವಾದ್ರೂ ಕಲಬುರ್ಗಿಯವರ ಹಂತಕರ ಪತ್ತೆ ಮಾಡಬೇಕು. ಇತ್ತೀಚೆಗೆ ಯಾವ ತನಿಖಾ ಅಧಿಕಾರಿಗಳು ನಮ್ಮ ಮನೆಗೆ ಬಂದಿಲ್ಲ. ನಾವು ತನಿಖೆಯನ್ನು ಚುರುಕುಗೊಳಿಸುವಂತೆ ಇಗಾಗಲೇ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದೇವೆ. ಈಗಿನ ಸರ್ಕಾರ ಆದಷ್ಟು ಬೇಗ ಹಂತಕರ‌ ಪತ್ತೆ ಮಾಡಬೇಕು ಎಂದು ಎಂ.ಎಂ.‌ಕಲಬುರ್ಗಿ ಪತ್ನಿ ಉಮಾದೇವಿ ಆಗ್ರಹಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv