ಲೇಸರ್​​ ಕ್ಷೇತ್ರದಲ್ಲಿ ಆವಿಷ್ಕಾರ: ಮೂರು ಭಾಗವಾಗಿ ಫಿಸಿಕ್ಸ್​ ನೊಬೆಲ್​ ಹಂಚಿಕೆ

ಸ್ವೀಡನ್​: ಇಂದಿನ ಜಗತ್ತಿನಲ್ಲಿ ಲೇಸರ್​ ಪಾತ್ರ ಅಪಾರ. ಅಂತಹ ಲೇಸರ್​ ಕ್ಷೇತ್ರದಲ್ಲಿ ಮಹತ್ವದ ಆವಿಷ್ಕಾರ ಮಾಡಿರುವ ಮೂವರು ಭೌತವಿಜ್ಞಾನಿಗಳಿಗೆ ನೊಬೆಲ್​ ಪ್ರಶಸ್ತಿಯನ್ನು ಮೂರು ಭಾಗವಾಗಿ ಹಂಚಿಕೆ ಮಾಡಿ, ಘೋಷಿಸಲಾಗಿದೆ.

ಪ್ರಶಸ್ತಿಯ ಮೊದಲರ್ಧ ಆರ್ಥರ್​ ಆಶ್​ಕಿನ್​ ಅವರಿಗೆ ಉಳಿದರ್ಧದಲ್ಲಿ ಸಮವಾಗಿ ಗೆನಾರ್ಡ್​ ಮೌರೋವ್​ ಹಾಗೂ ಡೊನ್ನಾ ಸ್ಟ್ರಿಕ್​ಲ್ಯಾಂಡ್​ ಅವರುಗಳಿಗೆ ನೀಡಿ, ಗೌರವಿಸಲಾಗಿದೆ ಎಂದು ರಾಯಲ್​ ಸ್ವೀಡಿಶ್​ ಅಕಾಡೆಮಿ ಇದೀಗತಾನೇ ಪ್ರಕಟಿಸಿದೆ. ಲಿಗೊ ಡಿಟೆಕ್ಟರ್​​ ಮತ್ತು ಗುರುತ್ವಾಕರ್ಷಣೆ ಅಲೆಗಳ ಕುರಿತಾದ ನಿರ್ಣಾಯಕ ಕೊಡುಗೆಗಾಗಿ ಈ ಮೂವರಿಗೂ ನೊಬೆಲ್​ ಗೌರವ ಸಂದಾಯವಾಗಿದೆ.

ಫಿಸಿಕ್ಸ್​ ಕ್ಷೇತ್ರದಲ್ಲಿ ಇದುವರೆಗೂ 111 ಬಾರಿ ಒಟ್ಟು 206 ಮಂದಿಗೆ ನೀಡಲಾಗಿದೆ. 1956 ಮತ್ತು 1972ರಲ್ಲಿ ಫಿಸಿಕ್ಸ್​ ಕ್ಷೇತ್ರದಲ್ಲಿ ಜಾನ್​ ಬರ್ದೀನ್​ ಎಂಬುವವರಿಗೆ ಎರಡು ಬಾರಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.