ರೆಸ್ಟ್​​ಗಿಂತ ಫಿಟ್​ನೆಸ್​​ ಮುಖ್ಯ ಎಂದ ಹಾರ್ದಿಕ್ ಪಾಂಡ್ಯಾ..!

ಐಪಿಎಲ್​ 12ರಲ್ಲಿ ವಿವಿಧ ತಂಡಗಳ ಪರ ಆಡಿ ದಣಿದಿದ್ದಿ ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ರೆಸ್ಟ್​ ನೀಡಿದೆ.ಯಾವುದೇ ಅಭ್ಯಾಸ ನಡೆಸದೇ ಆರಾಮಾಗಿ ಕಾಲ ಕಳೆದು ವಿಶ್ವಕಪ್​ಗೆ ಸಿದ್ಧರಾಗಿ ಎಂದು ಸೂಚಿಸಿದೆ.ಹೀಗಾಗಿ ಸಿಕ್ಕಿದ್ದೇ ಚಾನ್ಸ್ ಅಂತ ಕ್ಯಾಪ್ಟನ್ ವಿರಾಟ್ ಕೊಹ್ಲಿ,ಹಿಟ್​ಮ್ಯಾನ್ ರೋಹಿತ್ ಶರ್ಮಾ ಸೇರಿದಂತೆ ಇತರೆ ಆಟಗಾರರು ಕುಟುಂಬದ ಜೊತೆಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ.ಆದ್ರೆ,ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಮಾತ್ರ ನನಗೆ ರೆಸ್ಟ್​​ಗಿಂತ ಫಿಟ್​ನೆಸ್​ ಮುಖ್ಯ ಎನ್ನುತ್ತಿದ್ದಾರೆ.ಜಿಮ್​ನಲ್ಲಿ ಸಖತ್ ವರ್ಕೌಟ್ ಮೂಲಕ ಬೆವರು ಹರಿಸುತ್ತಿದ್ದಾರೆ.ತಮ್ಮ ವರ್ಕೌಟ್ ವೀಡೀಯೋವನ್ನ ಪಾಂಡ್ಯಾ ತಮ್ಮ ವಿಟರ್​ನಲ್ಲಿ ಪೋಸ್ಟ್​​ ಮಾಡಿದ್ದಾರೆ.ವಿಶ್ವಕಪ್ ಹತ್ತಿರವಾಗುತ್ತಿದೆ ಹೀಗಾಗಿ ವಿಶ್ರಾಂತಿ ದಿನಗಳಿಲ್ಲ ಎಂದು ಟ್ವಿಟ್​ ಮಾಡಿದ್ದಾರೆ.ಐಪಿಎಲ್​ ಟೂರ್ನಿಯಲ್ಲಿ ಪಾಂಡ್ಯಾ ಅದ್ಭುತ ಬ್ಯಾಟಿಂಗ್​ ಮೂಲಕ ಮಿಂಚಿದ್ರು.ಪವರ್​ ಹಿಟ್ಟಿಂಗ್ ಮೂಲಕ ಮುಂಬೈ ಇಂಡಿಯನ್ಸ್, ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ರು.