ಪೇಪರ್, ಕಾರ್ಟೇಜ್ ಖಾಲಿ; ಮೈಸೂರಿನ 15 ಕಚೇರಿಯಲ್ಲಿ ಆಗ್ತಿಲ್ಲ ನೋಂದಣಿ..!

ಮೈಸೂರು: ಜಿಲ್ಲೆಯ ಎಲ್ಲಾ ಸಬ್ ರಿಜಿಸ್ಟ್ರಾರ್ ಕಚೇರಿಯ ಕೆಲಸ ಕಾರ್ಯಗಳು ಸ್ಥಗಿತಗೊಂಡಿವೆ. ಕಚೇರಿಯಲ್ಲಿ ಪೇಪರ್, ಕಾರ್ಟೇಜ್ ಇಲ್ಲ ಅಂತಾ  ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿದ್ದಾರೆ. ಈ ಸಮಸ್ಯೆ ಕುರಿತಂತೆ ಜಿಲ್ಲಾ ನೋಂದಣಾಧಿಕಾರಿ ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಆದ್ರೆ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಜಿಲ್ಲೆಯಾದ್ಯಂತ 15 ಕಡೆಯಲ್ಲಿ ಕೆಲಸ ಸ್ಥಗಿತಗೊಂಡಿದ್ದು, ಸಿಬ್ಬಂದಿ ವರ್ಗ ಕೆಲಸ ಇಲ್ಲದೆ ಸುಮ್ಮನೆ ಕುಳಿತಿದ್ದಾರೆ. ಹೀಗಾಗಿ ಆಸ್ತಿ ನೋಂದಣಿಗಾಗಿ ಬಂದ ಸಾರ್ವಜನಿಕರು ಪರದಾಡುತ್ತಿದ್ದಾರೆ. ಮಾ. 31ಕ್ಕೆ ಟೆಂಡರ್ ಅವಧಿ ಮುಗಿದಿದೆ. ಬಳಿಕ ಇಲ್ಲಿಯವರೆಗೂ ಟೆಂಡರ್ ಆಗಿಲ್ಲ. ಅಲ್ಲದೇ, ಸಿಬ್ಬಂದಿ ವರ್ಗ 1 ತಿಂಗಳಿಂದ ಜನತಾ ಬಜಾರ್ ‌ಅಂಗಡಿಯಲ್ಲಿ ಸಾಲ ಪಡೆದು ಹಾಗೂ ಕಚೇರಿ ನಿರ್ವಹಣಾ ಹಣದಲ್ಲಿ ಕಚೇರಿಗಳಲ್ಲಿ ಕೆಲಸ ಕಾರ್ಯ ನಡೆಸಿದ್ರಂತೆ. ಹೀಗಿದ್ದರೂ ಸರ್ಕಾರದ ಯಾವೊಬ್ಬರೂ ಈ ಕಡೆ ಗಮನ ಹರಿಸಿಲ್ಲ. ನೋಂದಣಿ ಸ್ಥಗಿತದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv