ಯುವರಾಜ್, ರೈನಾ, ಅಶ್ವಿನ್, ಭಜ್ಜಿ ಖೇಲ್ ಖತಂ..!

2019ರ ಏಕದಿನ ವಿಶ್ವಕಪ್​ಗೆ, 15 ಸದಸ್ಯರ ಟೀಮ್ ಇಂಡಿಯಾ ಪ್ರಕಟಗೊಂಡಿದೆ. ನಿರೀಕ್ಷೆಯಂತೆ ಕೆಲ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ರೆ, ರಿಷಭ್ ಪಂತ್, ಅಂಬಟಿ ರಾಯುಡು ಅವಕಾಶವಂಚಿತರಾಗಿರೋದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಮತ್ತೊಂದೆಡೆ ತಂಡದ ಅನುಭವಿ ಆಟಗಾರರಾದ ಯುವರಾಜ್ ಸಿಂಗ್, ಸುರೇಶ್ ರೈನಾ, ಆರ್.ಅಶ್ವಿನ್ ಮತ್ತು ಹರ್ಭಜನ್ ಸಿಂಗ್, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ರು. ಆದ್ರೆ ಆಯ್ಕೆ ಸಮಿತಿ ಅನುಭವಿ ಆಟಗಾರರಿಗೆ ಮಣೆ ಹಾಕದೇ, ಯುವಕರಿಗೆ ತಂಡದಲ್ಲಿ ಚಾನ್ಸ್ ನೀಡಿದೆ. ಹೀಗಾಗಿ ಕೊನೆಯ ವಿಶ್ವಕಪ್ ಆಡಬೇಕು ಅಂತ ಕಾಯುತ್ತಿದ್ದ ಈ ನಾಲ್ವರು ಆಟಗಾರರ ಖೇಲ್ ಖತಂ ಆಗಿದೆ.