‘ಕಳೆದ ವರ್ಷ 272, ಈ ವರ್ಷ 69 ಉಗ್ರರನ್ನು ಮಟ್ಟ ಹಾಕಿದ್ದೇವೆ’ ಸೇನೆ ಹೇಳಿಕೆ

ಕಾಶ್ಮೀರ: ನಮ್ಮ ಸೇನಾ ಘಟಕದ ಖಡಕ್​ ಕಾರ್ಯಾಚರಣೆಯಿಂದಾಗಿ ಜೈಶ್​​​​ ಏ ಮೊಹಮ್ಮದ್​ ಉಗ್ರ ಸಂಘಟನೆಯನ್ನು ಮಟ್ಟಹಾಕಿದ್ದೇವೆ. ಪರಿಸ್ಥಿತಿ ಹೇಗಿದೆಯೆಂದ್ರೆ ಜೈಶ್ ಸಂಘಟನೆಯ ನೇತೃತ್ವ ವಹಿಸಲು ಕಣಿವೆ ರಾಜ್ಯದ ಜನಱರೂ ಮುಂದಾಗುತ್ತಿಲ್ಲ. ಅದರಲ್ಲೂ ಪುಲ್ವಾಮಾ ದಾಳಿಯ ನಂತ್ರ ಉಗ್ರರು ಹಿಂಜರಿಯುತ್ತಿದ್ದಾರೆ ಎಂದು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರತವಾಗಿರುವ ಭಾರತೀಯ ಸೇನೆಯ ಜಿಒಸಿ 15 ಕಾರ್ಪ್ಸ್​​ ಘಟಕದ ಮುಖ್ಯಸ್ಥ ಕೆಜೆಎಸ್ ಧಿಲ್ಲೋನ್​ ತಿಳಿಸಿದ್ದಾರೆ.​

2018ರಲ್ಲಿ 272 ಉಗ್ರರನ್ನು ಸಾಯಿಸಿದ್ದೆವು. ಈ ವರ್ಷ 69 ಉಗ್ರರನ್ನು ಸಾಯಿಸಲಾಗಿದೆ, 12 ಮಂದಿಯನ್ನು ಬಂಧಿಸಿದ್ದೇವೆ. ಇನ್ನು ಪುಲ್ವಾಮಾ ದಾಳಿ ಬಳಿಕ 41 ಭಯೋತ್ಪಾದಕರನ್ನು ಸಾಯಿಸಿದ್ದೇವೆ. ಅದರಲ್ಲಿ 25 ಮಂದಿ ಜೈಷೆ ಉಗ್ರರೇ ಆಗಿದ್ದಾರೆ. ಅದರಲ್ಲಿ 13 ಮಂದಿ ಪಾಕಿಸ್ತಾನಿಯರು ಎಂದು ಧಿಲ್ಲೋನ್​ ಹೇಳಿದ್ದಾರೆ.

ಆದ್ರೆ ನಾವು ಇಷ್ಟಕ್ಕೇ ಸುಮ್ಮನಾಗುವುದಿಲ್ಲ. ಭಯೋತ್ಪಾದಕರ ವಿರುದ್ಧ ನಮ್ಮ ಕಟ್ಟುನಿಟ್ಟಿನ ಕಾರ್ಯಾಚರಣೆ ಮುಂದುವರಿಯುತ್ತದೆ. ಭಯೋತ್ಪಾದನೆ ಮತ್ತೆ ಚಿಗಿತುಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ. ಪಾಕಿಸ್ತಾನವು ಭಯೋತ್ಪಾದನೆಗೆ ಎಷ್ಟೇ ಕುಮ್ಮಕ್ಕು ಕೊಟ್ಟರೂ ನಾವು ಅದನ್ನು ವಿಫಲಗೊಳಿಸುತ್ತೇವೆ ಎಂದು ಕೆಜೆಎಸ್ ಧಿಲ್ಲೋನ್​ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv