ರಾಜ್ಯದಲ್ಲಿ ಉಪ ಚುನಾವಣೆ ಅಗತ್ಯವಿರಲಿಲ್ಲ- ಬಿ.ಎಸ್​ ಯಡಿಯೂರಪ್ಪ

ಶಿವಮೊಗ್ಗ: ರಾಜ್ಯದಲ್ಲಿ ಉಪಚುನಾವಣೆ ಅಗತ್ಯವಿರಲಿಲ್ಲ. ಚುನಾವಣೆ ಆಯೋಗ ದೂರದೃಷ್ಟಿ ಇಟ್ಟುಕೊಳ್ಳದೆ ಚುನಾವಣೆಯನ್ನು ಘೋಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಬಿ.ಎಸ್​ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಶಿಕಾರಿಪುರದ ಮಂಗಳ ಭವನದಲ್ಲಿ ಹಮ್ಮಿಕೊಳ್ಳಲಾಗಿರುವ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಡಿಮೆ ಅವಧಿಯಲ್ಲಿ ನಾನು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಬೇಕಿದೆ. ಆದ್ದರಿಂದ ಶಿಕಾರಿಪುರದಲ್ಲಿ ಪ್ರಚಾರಕ್ಕೆ ಬರಬೇಕೆಂದು ಆಪೇಕ್ಷೆ ಪಡಬೇಡಿ. ಬೈಂದೂರಿನವರು ಕನಿಷ್ಠಪಕ್ಷ 50 ಸಾವಿರ ಮತಗಳನ್ನು ಕೊಡಿಸುವುದಾಗಿ ಮಾತು ಕೊಟ್ಟಿದ್ದಾರೆ. ಹಾಗಾಗಿ ಶಿಕಾರಿಪುರ ಕ್ಷೇತ್ರದ ಜನರು 50 ಸಾವಿರಕ್ಕೂ ಹೆಚ್ಚು ಮತಗಳನ್ನು ಕೊಡಿಸುವತ್ತ ಗಮನ ಹರಿಸಬೇಕು ಎಂದರು.
ನಮ್ಮ ಎದುರಾಳಿ ಬಗ್ಗೆ ನಾವು ಯೋಚಿಸುವ ಅಗತ್ಯವಿಲ್ಲ. ಅವರ ಹೆಸರನ್ನೂ ಹೇಳುವುದು ಬೇಡ. ದೊಡ್ಡ ಅಂತರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವತ್ತ ಕಾರ್ಯಕರ್ತರು ಗಮನ ಹರಿಸಬೇಕು ಎಂದರು. ತಾಲೂಕಿನ ಉಡುಗಣಿ, ಕಲ್ಲೊಡ್ಡು ಮತ್ತಿತರ ನೀರಾವರಿ ಯೋಜನೆಗಳ ಜಾರಿಗೆ ಗಮನ ಹರಿಸಲಾಗಿದ್ದು ಇನ್ನೊಂದು ವರ್ಷದಲ್ಲಿ ಅದು ಜಾರಿಯಾಗಲಿದೆ.

ಇದೇ ವೇಳೆ ಅವರು, ಸಮ್ಮಿಶ್ರ ಸರ್ಕಾರ ಬಿಳಿಸುವ ಯತ್ನ ನಾವು ಮಾಡ್ತಿಲ್ಲ. ವಿರೋಧ ಪಕ್ಷದಲ್ಲಿ ಕುಳಿತುಕೊಂಡಿದ್ದೇವೆ. ಪ್ರಚಾರ ಕಾರ್ಯ ಮಾಡ್ತಾ ಇದೀವಿ ಎಂದು ಬಿಎಸ್​ವೈ ಮಾಧ್ಯಮದ ವಿರುದ್ಧ ಗರಂ ಆದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv