ಬ್ರಿಮ್ಸ್‌ ಅವ್ಯವಸ್ಥೆ : ಲಿಫ್ಟ್ ಇಲ್ಲದೇ ಗರ್ಭಿಣಿಯರ ಪರದಾಟ

ಬೀದರ್: ಬೀದರ್ ಬ್ರಿಮ್ಸ್‌ ಆಸ್ಪತ್ರೆಯ ಅವ್ಯವಸ್ಥೆಗೆ ಕೊನೆ ಯಾವಾಗ? ಅನ್ನೋ ಪ್ರಶ್ನೆಗೆ ಉತ್ತರವೇ ಇಲ್ಲವೇನೋ ಅನ್ನೋ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಆಸ್ಪತ್ರೆಯ ಲಿಫ್ಟ್ ಕೆಟ್ಟು ನಿಂತ ಪರಿಣಾಮ ರೋಗಿಗಳು, ಗರ್ಭಿಣಿಯರು, ವೃದ್ಧರು ಮೆಟ್ಟಿಲು ಹತ್ತಲು ಪರದಾಡುವಂತಾಗಿದೆ. ಫಸ್ಟ್ ಪ್ಲೋರ್‌ನಲ್ಲಿ ಹೆರಿಗೆ ವಾರ್ಡ್,6ನೇ ಪ್ಲೋರ್‌ನಲ್ಲಿ ಆಪರೇಶನ್ ವಾರ್ಡ್‌ಗಳಿವೆ. ಅಲ್ಲಿಗೆ ಹೋಗಲು ಆಗದೇ ರೋಗಿಗಳು ಪರದಾಡುವಂತಾಗಿದೆ. ಕಂದಮ್ಮಗಳನ್ನು ಕೈಯಲ್ಲೇ ಹಿಡಿದುಕೊಂಡು ಮಹಿಳೆಯರು ಮೆಟ್ಟಿಲು ಹತ್ತುತ್ತಿರುವ ಪರಿಸ್ಥಿತಿ ಇದ್ದು, ಆಸ್ಪತ್ರೆಯ ರೋಗಿಗಳಿಗೂ ತೊಂದರೆಯಾಗುತ್ತಿದೆ. ಬೆಳಿಗ್ಗೆಯೇ ಲಿಫ್ಟ್ ಕೆಟ್ಟರೂ ಬ್ರಿಮ್ಸ್ ಸಿಬ್ಬಂದಿ ಮಾತ್ರ ಸರಿಪಡಿಸಲು ಮುಂದಾಗಿಲ್ಲ ಎಂದು ಆಸ್ಪತ್ರೆ ವಿರುದ್ಧ  ರೋಗಿಗಳು ಹಾಗೂ ಅವರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv