ಬೆಂಗಳೂರು ಮಂದಿಗೆ ಮತಎಣಿಕೆ ದಿನ ನೀರಿಲ್ಲ..!

ಬೆಂಗಳೂರು: ಚುನಾವಣೆ ಮುನ್ನಾದಿನ, ಚುನಾವಣೆ ದಿನ ಬಸ್​ಗಳು ಸಿಗದೆ ಜನ ಪರದಾಡಿದ್ದು ಸ್ವಲ್ಪ ಅಲ್ಲ. ಇದೀಗ ಮತ ಎಣಿಕೆ ದಿನ ಬೆಂಗಳೂರಿಗೆ ಕುಡಿಯೋ ನೀರಿನ ಟ್ರಬಲ್‌ ಕಾಡಲಿದೆ. ಮತ ಎಣಿಕೆ ದಿನ ಬೆಂಗಳೂರಿಗರಿಗೆ ಕಾವೇರಿ ನೀರು ಸಿಗೋದಿಲ್ಲ ಅಂತಾ ಬೆಂಗಳೂರು ಜಲಮಂಡಳಿ ಹೇಳಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಜಲಮಂಡಳಿ ಬೆಂಗಳೂರಿಗರು ಸಹಕರಿಸುವಂತೆ ಮನವಿ ಮಾಡಿದೆ. ಆದ್ರೆ ಈ ರೀತಿ ಕುಡಿಯೋ ನೀರು ಟ್ರಬಲ್‌ ಎದುರಾಗಲು ಮತ ಎಣಿಕೆ ಕಾರಣವಲ್ಲ.

ಯಂತ್ರಗಾರ ಉನ್ನತೀಕರಣದಿಂದ ನೀರು ಪೂರೈಕೆಯಲ್ಲಿ ವ್ಯತ್ಯಯ

ಟಿಕೆ ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಯಂತ್ರಗಾರಗಳ ಉನ್ನತೀಕರಣ ಹಿನ್ನೆಲೆ ಬೆಂಗಳೂರಿನಲ್ಲಿ ಮೇ 15ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅರ್ಧದಷ್ಟು ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವುದಿಲ್ಲ. ಬೆಳಗ್ಗೆ 8 ಗಂಟೆಯಿಂದ 4ರ ವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಜಯನಗರ, ಜೆ.ಪಿ.ನಗರ, ಬಸವನಗುಡಿ, ಕೆ.ಎಸ್.ಲೇಔಟ್, ಬನಶಂಕರಿ, ದೊಮ್ಮಲೂರು, ಬಿ.ಟಿ.ಎಂ.ಲೇಔಟ್, ಇಂದಿರಾನಗರ, ಶಾಂತಿನಗರ, ಕೋರಮಂಗಲ, ವಿಜಯನಗರ, ಮತ್ತಿಕೆರೆ, ಮಲ್ಲೇಶ್ವರಂ, ಆರ್.ಟಿ.ನಗರ, ಮಡಿವಾಳ, ಯಲಚೇನಹಳ್ಳಿ, ಕಸ್ತೂರಿ ಬಾ ರಸ್ತೆ, ಮೆಜೆಸ್ಟಿಕ್, ಸದಾಶಿವನಗರ, ಸೇರಿದಂತೆ ಹಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.