ಬೆಣ್ಣೆನಗರಿಯಲ್ಲೂ ಕಾಲಾ ಚಿತ್ರ ಪ್ರದರ್ಶನಕ್ಕೆ ಬ್ರೇಕ್​​

ದಾವಣಗೆರೆ: ನಟ ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ಬೆಂಗಳೂರಿನಲ್ಲಿ ಬ್ರೇಕ್​​ ಬಿದ್ದಿದ್ದು, ಬೆಣ್ಣೆ ನಗರಿಯಲ್ಲೂ ಚಿತ್ರ ಪ್ರದರ್ಶನ ಮಾಡದಿರಲು ಚಿತ್ರಮಂದಿರದ ಮಾಲೀಕರು ನಿರ್ಧರಿಸಿದ್ದಾರೆ. ದಾವಣಗೆರೆಯ ಎರಡು ಚಿತ್ರ ಮಂದಿರಗಳಲ್ಲಿ ಕಾಲಾ ಚಿತ್ರ ಬಿಡುಗಡೆ ನಿಗದಿಯಾಗಿತ್ತು. ಆದ್ರೆ ಕಳೆದ ಒಂದು ವಾರದಿಂದ ಕರುನಾಡ ಸೇವಕರು ಮತ್ತು ಇತರೆ ಕನ್ನಡ ಪರ ಸಂಘಟನೆಗಳು ಚಿತ್ರ ಬಿಡುಗಡೆ ಮಾಡದಂತೆ ಥಿಯೇಟರ್ ಮಾಲೀಕರಿಗೆ ಮನವಿ ಮಾಡಿದ್ದವು. ಅಲ್ಲದೇ ಒಂದು ವೇಳೆ ಬಿಡುಗಡೆ ಮಾಡಿದ್ರೆ ಪರಿಣಾಮ ಎದುರಿಸಬೇಕಾಗತ್ತೆ ಅನ್ನೋ ಎಚ್ಚರಿಕೆ ಸಹ ನೀಡಿದ್ದರು. ಹಾಗಾಗಿ ಚಿತ್ರ ಬಿಡುಗಡೆಗೆ ಥಿಯೇಟರ್ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ.
ಇಂದು ರಾಜ್ಯಾದ್ಯಂತ ಏನು ತೀರ್ಮಾನ ಕೈಗೊಳ್ತಾರೋ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕಾವೇರಿ ನೀರು ಹಂಚಿಕೆ ಕುರಿತಂತೆ ನಟ ರಜನಿಕಾಂತ್‌ ನೀಡಿದ ಹೇಳಿಕೆ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾಲಾ ಚಲನಚಿತ್ರ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ವಿಷಯ ಕೋರ್ಟ್​ ಮೆಟ್ಟಿಲೇರಿ ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಗ್ರೀನ್​ ಸಿಗ್ನಲ್​​ ಸಿಕ್ಕಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv