ಹೆಲ್ಮೆಟ್‌ನಿಂದ ಕೂದಲು ಉದುರುತ್ತಾ.. ಇದನ್ನ ಫಾಲೋ ಮಾಡಿ..!

ಎಲ್ಲಾದ್ರೂ ಹೊರಗೆ ಹೋಗಬೇಕು ಅಂದ್ರೆ, ಜನರು ಒಳ್ಳೆ ಬಟ್ಟೆ ಹಾಕ್ಕೊಂಡು, ನೀಟಾಗಿ ಹೇರ್​ ಸ್ಟೈಲ್​ ಮಾಡಿಕೊಂಡು ಆಚೆ ಬರ್ತಾರೆ. ಆದ್ರೆ, ಹೆಲ್ಮೆಟ್​ ಹಾಕ್ಕೊಬೇಕು ಅಂತಾ ನೆನಪಾದ ಕೂಡಲೇ ಬೇಜಾರು ಮಾಡ್ಕೋತಾರೆ. ಅಯ್ಯೋ ಹೇರ್​ಸ್ಟೈಲ್​ ಹಾಳಾಗುತ್ತಲ್ಲಾ ಅನ್ನೋದು ಒಂದು ಚಿಂತೆಯಾದ್ರೆ, ಹೇರ್​ ಫಾಲ್ ಆಗುತ್ತೆ ಅನ್ನೋದು ಮತ್ತೊಂದು ಚಿಂತೆ. ಆದರೆ, ಚಿಂತೆ ಬಿಡಿ. ಹೆಲ್ಮೆಟ್​ ಧರಿಸಿ ಆಗ್ತಿರೋ ಹೇರ್​ಫಾಲ್​ಗೆ ಈ ಟಿಪ್ಸ್​ ಫಾಲೋ ಮಾಡಿ.

1.ನಿಮ್ಮ ಸ್ಕಾಲ್ಪ್ ಸ್ವಚ್ಚವಾಗಿರಬೇಕು ಮತ್ತು ನಿಮ್ಮ ತಲೆ ಅಲುಗಾಡಿದರು ಸಹ ಹೆಲ್ಮೆಟ್ ಫಿಕ್ಸ್ ಆಗಿದ್ದ ಸ್ಥಳದಲ್ಲೇ ಇರುವಂತಿರಬೇಕು.
2.ನಿಮ್ಮ ತಲೆಯನ್ನ ಕಾಟನ್ ಬಟ್ಟೆ ಅಥವಾ ಸ್ಕಾರ್ಫ್​ನಿಂದ ಕಟ್ಟಿಕೊಳ್ಳಬೇಕು. ಇದರಿಂದ ನಿಮ್ಮ ತಲೆಯಲ್ಲಿನ ತೇವಾಂಶವನ್ನ ಬಟ್ಟೆ ಹೀರಿಕೊಳ್ಳುತ್ತದೆ.
3.ಹೆಲ್ಮೆಟ್ ತೆಗೆದುಕೊಳ್ಳುವಾಗ ಸಹ ನಿಮ್ಮ ತಲೆಗೆ ಸರಿಯಾಗಿ ಫಿಕ್ಸ್ ಆಗುವಂತಹ ಹೆಲ್ಮೆಟ್​ಗಳನ್ನ ಚ್ಯೂಸ್ ಮಾಡ್ಕೊಳ್ಳಬೇಕು​
4.ಹೆಲ್ಮೆಟ್ ತಗಿಯುವಾಗಲು ಸಹ ಸಡನ್ ಆಗಿ ತೆಗೆಯಬಾರದು. ನಿಧಾನವಾಗಿ ಹೆಲ್ಮೆಟ್​ನ ಅಲುಗಾಡಿಸಿ ನಂತರ ತೆಗೆಯಬೇಕು.
5.ಲಾಂಗ್ ಡ್ರೈವ್ ಮಾಡುವ ಹಾಗಿದ್ದರೆ, ಮಾರ್ಗ ಮಧ್ಯೆ ಆಗಾಗ ಹೆಲ್ಮೆಟ್​ನ್ನ ತೆಗೆದು ಹಾಕಬೇಕು. ಒಂದೇ ಸಮನೆ ಘಂಟೆ ಗಟ್ಟಲೆ ಉಪಯೋಗಿಸಬಾರದು.
6.ಇನ್ನು ಹೆಲ್ಮೆಟ್ ತೆಗೆಯುವಾಗ ಕೂದಲು ಹೆಲ್ಮೆಟ್​ಗೆ ಸಿಕ್ಕಿ ಹಾಕಿಕೊಂಡಿದ್ದಲ್ಲಿ ನಿಧಾನವಾಗಿ ತೆಗೆಯಬೇಕು.
7.ಹೆಲ್ಮೆಟ್ ಹಾಕುವುದಕ್ಕಿಂತ ಮುಂಚೆ ಕೂದಲು ಒಣಗಿರಬೇಕು. ಕೂದಲನ್ನ ಒದ್ದೆ ಬಿಡಬಾರದು.

ವಿಶೇಷ ಬರಹ: ಪವಿತ್ರಾ

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv