ಚುಂಚನಕಟ್ಟೆ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿಷೇಧ

ಮೈಸೂರು: ಮೂರು ದಿನಗಳ ಹಿಂದೆ ಸಂಶೋಧನಾ ವಿಜ್ಞಾನಿಯೊಬ್ಬರು ಜಲಪಾತದ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಹಿನ್ನೆಲೆ ಚುಂಚನಕಟ್ಟೆ ಜಲಪಾತಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಭಾನುವಾರದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕೆ.ಆರ್.ನಗರ ತಾಲೂಕು ಆಡಳಿತ, ಈ ಕ್ರಮಕ್ಕೆ ಮುಂದಾಗಿದೆ. ಕೆ.ಆರ್.ನಗರ ತಹಶೀಲ್ದಾರ್ ಮಹೇಶ್ ಚಂದ್ರ ಈ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಜಲಪಾತದ ಸುತ್ತ ತಂತಿ ಬೇಲಿ ನಿರ್ಮಿಸಿ ಸಿಬ್ಬಂದಿ ನೇಮಕಕ್ಕೆ ಮುಂದಾಗಿದ್ದಾರೆ.
ಭಾನುವಾರ ಕುಟುಂಬಸ್ಥರೊಂದಿಗೆ ವಿಕೇಂಡ್​ ಮಸ್ತಿಗಾಗಿ ಚುಂಚನಕಟ್ಟೆ ಫಾಲ್ಸ್​​​ಗೆ ತೆರಳಿದ್ದ ವೇಳೆ ನೆಲಮಂಗಲ ಮೂಲದ ಸೋಮಶೇಖರ್​​​​ ಮೃತಪಟ್ಟಿದ್ದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv