‘ಇಂದಿನಿಂದ ಮನೆ ಮುಂದೆ ಬಂದು ಕಸ ಸಂಗ್ರಹಿಸಲ್ಲ’

ಬೆಂಗಳೂರು: ಬಾಕಿ ಬಿಲ್ ಪಾವತಿ ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಇಂದಿನಿಂದ ತ್ಯಾಜ್ಯ ಸಾಗಣೆ ಲಾರಿ ಮಾಲೀಕರು, ಗುತ್ತಿಗೆದಾರರು ಹಾಗೂ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.
30ಕ್ಕೂ ಹೆಚ್ಚಿನ ವಾರ್ಡ್​ಗಳಲ್ಲಿ ಕಸ ವಿಲೇವಾರಿ ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸ್ತಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದು ಬಿಬಿಎಂಪಿ ಎದುರು ಅನಿರ್ಧಿಷ್ಠಾವಧಿ ಪ್ರತಿಭಟನೆ ಕೈಗೊಂಡಿದ್ದಾರೆ. ಸರ್ಕಾರ ಮಧ್ಯ ಪ್ರವೇಶಿಸದಿದ್ದರೆ ಗಾರ್ಡನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

 

 

ಪ್ರತಿಭಟನಾಕಾರರ ಬೇಡಿಕೆಗಳೇನು..?

⦁ ಗುತ್ತಿಗೆದಾರರ 220 ಕೋಟಿ ಬಾಕಿ ಬಿಲ್​ ಅನ್ನು‌ ಕೂಡಲೇ ಪಾವತಿಸಬೇಕು.
⦁ 2017ರ ಆಗಸ್ಟ್​ನಿಂದ ಡಿಸೆಂಬರ್​ವರೆಗೆ ಹಿಡಿದಿಟ್ಟುಕೊಂಡಿರುವ ಶೇ.10 ಬಿಲ್ ಮೊತ್ತ ಪಾವತಿಸಬೇಕು.
⦁ ತ್ಯಾಜ್ಯ ಗುತ್ತಿಗೆ ಮೇಲಿನ ಸೇವಾ ತೆರಿಗೆ ವಜಾಗೊಳಿಸಬೇಕು. ಸೇವಾ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ಗುತ್ತಿಗೆದಾರರಿಗೆ ನೋಟಿಸ್ ಕಳುಹಿಸಲಾಗುತ್ತಿದೆ.
⦁ ಕಸ ಸಂಸ್ಕರಣಾ ಘಟಕಗಳಿಗೆ ತೆರಳುವ ಮಾರ್ಗದ ಟೋಲ್​ಗೆ ಶುಲ್ಕ ಪಾವತಿಸಬೇಕು.
⦁ ಗುತ್ತಿಗೆ ಪೌರಕಾರ್ವಿುಕರಿಗೆ ಪಾವತಿಸಬೇಕಿರುವ ಇಎಸ್​ಐ ಹಾಗೂ ಪಿಎಫ್ ಕೂಡಲೇ ಪಾವತಿಸಬೇಕು.
⦁ ವಾಹನ ಚಾಲಕರು ಮತ್ತು ಸಹಾಯಕರಿಗೆ ಭತ್ಯೆ ನೀಡಬೇಕು.
⦁ ವಾಹನಗಳಿಗೆ ಇಂಧನ ಮತ್ತು ದುರಸ್ತಿ ವೆಚ್ಚ ನೀಡಬೇಕು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv