ಕ್ಯಾಮರಾ, ಲೆನ್ಸ್ ಇಲ್ಲ.. ಹಳ್ಳಿ ಹುಡುಗನ ‘ಮೊಬೈಲ್’ ಕಮಾಲ್..!

ಈರಣ್ಣ ಬಡಿಗೇರ್, ಮೊಬೈಲ್ ಫೋಟೋಗ್ರಾಫರ್

ಕೊಪ್ಪಳ: ಒಂದು ಫೋಟೋ ಸಾವಿರ ಪದಗಳಿಗೆ ಸಮಾನ ಅಂತ ಹೇಳ್ತಾರೆ. ಒಂದು ದೃಶ್ಯ ಕೂಡ ಅಷ್ಟೆ. ಫೋಟೋ ಮತ್ತು ದೃಶ್ಯಗಳು ಇಡೀ ಕಥೆಯನ್ನು ಹೇಳುವಷ್ಟು ಸಾಮರ್ಥ್ಯ ಹೊಂದಿರುತ್ತವೆ. ಇಂಥ ಫೋಟೋಗ್ರಫಿ, ವಿಡಿಯೋಗ್ರಫಿ ಹುಚ್ಚು ಹಚ್ಚಿಸಿಕೊಂಡವರು ಅದೇಷ್ಟೋ ಜನ ನಮ್ಮ ಸುತ್ತ ಮುತ್ತ ಕಾಣುತ್ತಾರೆ. ಆದ್ರೆ ಇಲ್ಲೊಬ್ಬರು ಫೋಟೋಗ್ರಾಫರ್ ಇದ್ದಾರೆ, ಅವರ ಹತ್ತಿರ ಯಾವುದೇ ಕ್ಯಾಮೆರಾ ಇಲ್ಲ. ಲೆನ್ಸ್ ಇಲ್ಲ. ಆದ್ರೆ ಕ್ರಿಯೇಟಿವಿಟಿ ಇದೆ. ಮೊಬೈಲ್​​​​​​ನಲ್ಲಿಯೇ ಅತ್ಯದ್ಭುತ ಫೋಟೋ ತೆಗೆಯುವ ಹುಚ್ಚು ಇವರಿಗಿದೆ. ನಿಸರ್ಗದ ಸೌಂದರ್ಯ, ಪ್ರಾಣಿ ಪಕ್ಷಿಗಳ ಚಲವನಗಳ ದೃಶ್ಯಗಳನ್ನು ಸೆರೆ ಹಿಡಿಯಬೇಕಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅತ್ಯಾಧುನಿಕ ಕ್ಯಾಮರಾ ಬಳಕೆ ಮಾಡ್ತಾರೆ. ಆದ್ರೆ ಕೊಪ್ಪಳದಲ್ಲಿರುವ ಈರಣ್ಣ ಬಡಿಗೇರ್ ಮಾತ್ರ ಮೊಬೈಲ್​​​​​​ ಕ್ಯಾಮರಾದಲ್ಲಿಯೇ ತಮ್ಮ ಕೈಚಳಕ  ತೋರಿಸುತ್ತಾರೆ.
ಕ್ಯಾಮರಾ ಖರೀದಿ ಮಾಡುವಷ್ಟು ಹಣವಿಲ್ಲ..!
ಈರಣ್ಣ ಖಾಸಗಿ ವಾಹಿನಿ ಕ್ಯಾಮರಾಮ್ಯಾನ್. ಸಮಯ ಸಿಕ್ಕಾಗ ಕಾಡು, ಬೆಟ್ಟ, ನದಿ, ಹಳ್ಳಿ ಇನ್ನಿತರ ಕಡೆ ತಮ್ಮ ಮೊಬೈಲ್​​​​ನಲ್ಲಿ ಪೋಟೋ ಕ್ಲಿಕ್ಕಿಸಲು ತೆರಳುತ್ತಾರೆ. ಒಂದು ಉತ್ತಮ ಫೋಟೋಗಾಗಿ ಗಂಟೆಗಟ್ಟಲೇ ಕಾಯುತ್ತಾರೆ. ಅವರ ಹುಚ್ಚು ಅಂಥದ್ದು. ನಿಸರ್ಗ ನಮಗೆ ಕಲಿಸುವ ಪಾಠಗಳನ್ನು ತಮ್ಮ ಮೊಬೈಲ್​​​​​ನಲ್ಲಿ ಈರಣ್ಣ ಆರ್ಕಷಕವಾಗಿ ಸೆರೆ ಹಿಡಿಯುತ್ತಾರೆ. ಈ ಪೋಟೋಗಳನ್ನು ನೋಡುತ್ತಾ ಹೋದ್ರೆ ನಂಬೋಕೆ ಆಗುವುದಿಲ್ಲ. ಅಷ್ಟು ಸುಂದರವಾದ ಮತ್ತು ಸ್ಪಷ್ಟವಾದ ಫೋಟೋಗಳನ್ನು ಮೊಬೈಲ್​​​​​​​​​​​​​​​​​​​ನಲ್ಲಿ ಸೆರೆ ಹಿಡಿಯಬಹುದಾ? ಎಂಬ ಪ್ರಶ್ನೆಗಳು ಮೂಡುತ್ತವೆ. ಈರಣ್ಣ ತಾನು ತೆಗೆದ ಫೋಟೋಗಳನ್ನು ತಮ್ಮ ಫೇಸ್​​ಬುಕ್ ಪೇಜ್​​​​​​​​​ನಲ್ಲಿ ಹಾಕುತ್ತಾರೆ. ಇವರ ಬಳಿ ದೊಡ್ಡ ಕ್ಯಾಮೆರಾ ಖರೀದಿ ಮಾಡುವಷ್ಟು ಹಣವಿಲ್ಲ. ಬರುವ ಸಂಬಳದಲ್ಲಿ ಜೀವನ ಸಾಗಿಸಬೇಕು. ಬಡ ಕುಟುಂಬದಿಂದ ಬಂದವರು. ತಾನು ಕಲಿತ ಫೋಟೊಗ್ರಫಿ ಫೀಲ್ಡ್​​​​ನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ, ತುಡಿತ ಅವರಲ್ಲಿದೆ.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv