ಬಿಸಿಸಿಐ ನಿಷೇಧ ಶಿಕ್ಷೆಯಿಂದ ಪಾರಾಗುತ್ತಾರಾ ರಾಹುಲ್​..?

ಟಾಕ್​ ಶೋ ‘ಕಾಫಿ ವಿತ್​ ಕರಣ್​’ನಲ್ಲಿನ ವಿವಾದಗಳಿಗೆ ಸಂಬಂಧಿಸಿದಂತೆ ಕನ್ನಡಿಗ ಕೆ. ಎಲ್​. ರಾಹುಲ್​ ನಿಷೇಧ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಗಳಿವೆ ಇನ್ನಲಾಗುತ್ತಿದೆ. ಆದ್ರೆ ರಾಹುಲ್​ ಜೊತೆ ಭಾಗವಹಿಸಿದ್ದ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಕೆಲ ಪಂದ್ಯಗಳಿಗೆ ಬ್ಯಾನ್​ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕರಣ್​ ಜೋಹರ್​ ನಡೆಸಿಕೊಡುವ ‘ಕಾಫಿ ವಿತ್​ ಕರಣ್​’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ, ಕನ್ನಡಿಗ ಕೆ. ಎಲ್​. ರಾಹುಲ್​ ಹಾಗೂ ಹಾರ್ದಿಕ್​ ಪಾಂಡ್ಯ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ರು. ಅದರಲ್ಲೂ ಪಾಂಡ್ಯ ಹೇಳಿಕೆಗಳು ಮಹಿಳೆಯರಿಗೆ ಸಂಬಂಧಿಸಿದಂತೆ ಕೀಳು ಅಭಿರುಚಿಯನ್ನ ಹೊರಹಾಕಿದಂತಿತ್ತು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ  ಅಭಿಮಾನಿಗಳಿಂದ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು. ನಂತರ ಎಚ್ಚೆತ್ತುಕೊಂಡ ಬಿಸಿಸಿಐ, ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೇಳೆ ನೋಟಿಸ್​ ಜಾರಿ ಮಾಡಿತ್ತು. ಸದ್ಯ ರಾಹುಲ್​ ನಿಷೇಧದಂತ ಕಠಿಣ ಶಿಕ್ಷೆಯಿಂದ ಪಾರಾಗುವ ಸಾಧ್ಯತೆಗಳಿದ್ದು, ಪಾಂಡ್ಯ ಒಂದೆರಡು ಪಂದ್ಯಗಳಿಗೆ ನಿಷೇಧಕ್ಕೊಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv