ತೆಪ್ಪದಲ್ಲಿ ತೇಲಿದ ಬಿಗ್‌ಬಾಸ್‌ ಗೊಂಬೆ..!

ಗ್ಲಾಮರ್ ದುನಿಯಾ ಅಂದ್ರೆ ಅದೇನೋ ಸೆಳೆತ. ಬಿಟ್ಟರೂ ಬಿಡದೀ ಮಾಯೆ ಅಂತಾರಲ್ಲ ಹಾಗೆ. ಇದು ಗ್ಲಾಮರ್ ದುನಿಯಾಕ್ಕೆ ಎಂಟ್ರಿ ಕೊಡೋ ಬಹುತೇಕರ ವಿಚಾರದಲ್ಲಿ ಸತ್ಯವೂ ಆಗಿದೆ. ಅದ್ರಲ್ಲೂ ಬಿಗ್ ಬಾಸ್​ನಂಥ ರಿಯಾಲಿಟಿ ಶೋ ಮೂಲಕ ಮನೆ ಮಾತಾದ್ರೆ, ಅಲ್ಲಿಂದ ಹೊರ ಬಂದ್ಮೇಲೆ ಸುಮ್ಮನೆ ಕೂರೋಕೆ ಆಗುತ್ತಾ? ನೋ ಚಾನ್ಸ್… ಗೊಂಬೆ ವಿಚಾರದಲ್ಲೂ ಇದು ಸತ್ಯ. ಮೈಸೂರಿನ ಬೆಡಗಿ ನಿವೇದಿತಾ ಗೌಡ, ಬಿಗ್ ಬಾಸ್-5 ತನ್ನ ಮುಗ್ಧತೆ, ಬ್ಯೂಟಿ, ಡಿಫರೆಂಟ್ ಆಗಿ ಮಾತನಾಡುವ ಶೈಲಿಯಿಂದಲೇ ಕನ್ನಡಿಗರ ಮನಸು ಕದ್ದೋರು. ಅದ್ರಲ್ಲೂ ಪಡ್ಡೆ ಹುಡುಗರ ನಿದ್ದೆಗೆಡಸಿದೋರು. ಬಿಗ್‌ಬಾಸ್​ನಿಂದ ಹೊರ ಬಂದ್ಮೇಲೆ ನಿವೇದಿತಾ ತಮ್ಮ ಸ್ಟಡೀಸ್ ಬಗ್ಗೆ ಕಾನ್​ಸಂಟ್ರೇಟ್ ಮಾಡ್ತಿದ್ದಾರೆ. ಌಕ್ಟಿಂಗ್ ಮಾಡೋ ಆಸೆ ಇದೆಯಾ ಅಂದ್ರೆ, ಅಂಥದ್ದೇನಿಲ್ಲ ಅಂತ ಹೇಳಿದ್ದಾರೆ.

ಕನ್ನಡಿಗರ ಪ್ರೀತಿಯ ಗೊಂಬೆ ನಿವಿಗೆ ಗಗನಸಖಿ ಆಗಬೇಕು ಅನ್ನೋ ಕನಸಿದೆ. ಸದ್ಯ ಅವರ ಗಮನವೆಲ್ಲಾ ಅದ್ರ ಮೇಲೆಯೇ. ಅದ್ರೆ, ಫ್ರೀ ಟೈಮ್​ನಲ್ಲಿ ನಿವೇದಿತಾ ಏನ್ಮಾಡ್ತಾರೆ..? ಈ ಪ್ರಶ್ನೆಗೆ ಉತ್ತರ ಮತ್ತದೇ ಗ್ಲಾಮರ್ ವರ್ಲ್ಡ್. ನಿವೇದಿತಾ ತಮ್ಮ ಓದು, ಕನಸುಗಳ ಜೊತೆ ಜೊತೆಗೆ ಒಂದಷ್ಟು ಌಡ್ಸ್​ಗಳನ್ನ ಮಾಡ್ತಿದ್ದಾರೆ. ಜೊತೆಗೆ ಫೋಟೋ ಶೂಟ್ ಅಂತಲೂ ಬ್ಯುಸಿಯಾಗಿದ್ದಾರೆ. ಇದೀಗ ಅವರ ಹೊಸ ಫೋಟೋ ಶೂಟ್​ನ ಕೆಲವು ಪಿಕ್ಸ್ ಫಸ್ಟ್ ನ್ಯೂಸ್​ಗೆ ಲಭ್ಯವಾಗಿವೆ.

ಮೈಸೂರಿನ ನಿಮಿಷಾಂಬ ದೇವಸ್ಥಾನದ ಬಳಿ ಇರುವ ಕೆರೆ ಹಾಗೂ ಪ್ರಕೃತಿಯ ಸುಂದರ ತಾಣಗಳ ಬ್ಯಾಕ್​ಗ್ರೌಂಡ್​ನಲ್ಲಿ ನಡೆದಿರೋ ಫೋಟೋ ಶೂಟ್​ನಲ್ಲಿ ಗೊಂಬೆ ಮತ್ತೊ,ಮ್ಮೆ ಗೊಂಬೆಯಂತೆಯೇ ಮಿಂಚಿದ್ದಾರೆ. ಮನೋಜ್ ಫೋಟೋ ವರ್ಕ್ಸ್ ಸ್ಟುಡಿಯೋಸ್ ಈ ಫೋಟೋ ಶೂಟ್ ಮಾಡಿದೆ. ಗೊಂಬೆಯ ಹೊಸ ಫೋಟೋ ಶೂಟ್​ನ ಝಲಕ್ ಇಲ್ಲಿದೆ.

 

ವರದಿ: ಸೋಮಣ್ಣ ಮಾಚಿಮಾಡ