ಇಂದು ನಿತ್ಯಾನಂದ ಪ್ರಕರಣದ ವಿಚಾರಣೆ

ರಾಮನಗರ: ಸ್ವಯಂ ಘೋಷಿತ ದೇವಮಾನ ನಿತ್ಯಾನಂದನ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆ ಇಂದು ರಾಮನಗರ ಸೆಷನ್ಸ್ ಕೋರ್ಟ್​​ನಲ್ಲಿ ನಡೆಯಲಿದೆ. ನಿತ್ಯಾನಂದ ವಿರುದ್ಧ ಇಂದು ಕೋರ್ಟ್​ಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತೆ. ಇದಾದ ಬಳಿಕ ಯಾವೆಲ್ಲಾ ದೋಷಾರೋಪಗಳ ಮೇಲೆ ತನಿಖೆ ನಡೆಸಬೇಕು ಅನ್ನೋದನ್ನ ನಿರ್ಧರಿಸಲಾಗುತ್ತೆ. ಬಳಿಕ ನಿತ್ಯಾನಂದ ವಿರುದ್ಧ ವಿಚಾರಣೆ ಆರಂಭಗೊಳ್ಳಲಿದೆ.

ಆದರೆ ಈ ವಿಚಾರಣೆಗೆ ಹೈಕೋರ್ಟ್​​ನಿಂದ ತಡೆಯಾಜ್ಞೆ ತರುವುದಕ್ಕೆ ನಿತ್ಯಾನಂದ ಪ್ರಯತ್ನಿಸುತ್ತಿದ್ದಾರೆ. ಪ್ರಕರಣದ ಎಲ್ಲಾ 6 ಮಂದಿ ಆರೋಪಿಗಳು ವಿಚಾರಣೆಗೆ ತಡೆಯಾಜ್ಞೆ ಹಾಗೂ ಪ್ರಕರಣದ ವಜಾ ಕೋರಿ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ಸಂಜೆ 4 ಗಂಟೆಗೆ ಹೈಕೋರ್ಟ್​ನಲ್ಲಿ ಇದರ ವಿಚಾರಣೆ ನಡೆಯಲಿದೆ.

ಫೆಬ್ರವರಿ 19ರಂದು ಪ್ರಕರಣದ ವಜಾ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ರಾಮನಗರ ಕೋರ್ಟ್ ತಿರಸ್ಕರಿಸಿತ್ತು. 2014 ಮತ್ತು 2017ರಲ್ಲಿ ನಿತ್ಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನ ತೀವ್ರ ಗತಿಯಲ್ಲಿ ನಡೆಸಬೇಕು ಅಂತ ಸುಪ್ರೀಂಕೋರ್ಟ್ ಆದೇಶಿಸಿತ್ತು.

 

Leave a Reply

Your email address will not be published. Required fields are marked *