ನಿತ್ಯಾನಂದ ವಿರುದ್ಧ ಸಾಕ್ಷಿ ಹೇಳಲು ಬಂದ ಆರತಿ ರಾವ್‌ಗೆ ಬೆದರಿಕೆ…!

ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಸಾಕ್ಷಿ ಹೇಳಲು ರಾಮನಗರ ಕೋರ್ಟ್‌ಗೆ ಬಂದಿದ್ದ ಆರತಿ ರಾವ್‌ ಹಾಗೂ ಲೆನಿನ್‌ ಅವರ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಕೇಳಿಬಂದಿದೆ. ನಿತ್ಯಾನಂದನ ಶಿಷ್ಯರು ಕೋರ್ಟ್‌ ಆವರಣದಲ್ಲಿ ನಿಂತು ಚಿತ್ರೀಕರಣ ಮಾಡಿದ್ದಾರೆ. ಈ ವೇಳೆ ಆತನನ್ನು ಆರತಿ ರಾವ್‌ ಪ್ರಶ್ನಿಸಿದ್ದಾರೆ. ಆದ್ರೆ ಇದಕ್ಕೆ ಉತ್ತರಿಸಿರೋ ಆತ, ಅತ್ಯಾಚಾರ ಪ್ರಕರಣದಲ್ಲಿ ನಿತ್ಯಾನಂದ ವಿರುದ್ಧ ಸಾಕ್ಷಿ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ನಟಿ ರಂಜಿತಾ ಪ್ರಕರಣ ಸಂಬಂಧ ಹೇಳಿಕೆ ನೀಡಲು ಆರತಿ ರಾವ್‌ ಹಾಗೂ ಲೆನಿನ್‌ ಕೋರ್ಟ್‌ ಬಂದಿದ್ದಾಗ ಘಟನೆ ನಡೆದಿದೆ. ಈ ಸಂಬಂಧ ಆರತಿ ರಾವ್‌ ಪೊಲೀಸರಿಗೆ ದೂರು ನೀಡಿದ್ದು, ನಿತ್ಯಾನಂದ ಹಾಗೂ ಆತನ ಬೆಂಬಲಿಗರ ವಿರುದ್ಧ ಸೂಕ್ತ ಕ್ರಮ ಕೈಗೊಂಡು, ತಮಗೆ ರಕ್ಷಣೆ ನೀಡುವಂತೆ ಕೋರಿದ್ದಾರೆ. ವಿಡಿಯೋ ಮಾಡಿದ್ದ ಫೋನ್‌ ಸೀಜ್‌ ಮಾಡಿರೋ ಪೊಲೀಸರು, ಎಫ್‌ಐಆರ್‌ ದಾಖಲಿಸಿದ್ದಾರೆ.

 ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv