ಕೆಕೆಆರ್​​ ಆಲ್​ರೌಂಡರ್​​ ಎಂಗೇಜ್​ಮೆಂಟ್​​ ರಿಂಗ್ ತೊಡಿಸಿದ್ದು ಯಾರಿಗೆ..?

ಸದ್ಯ ಐಪಿಎಲ್​ ಮುಗಿಸಿಕೊಂಡು ಬಿಡುವಿನಲ್ಲಿರುವ ಆಟಗಾರರು ವೈಯಕ್ತಿಕ ಜೀವನದತ್ತ ದೃಷ್ಟಿ ನೆಟ್ಟಿದ್ದಾರೆ. ಇತ್ತೀಚೆಗಷ್ಟೇ ಕಿಂಗ್ಸ್ ಇಲವೆನ್​ ಪಂಜಾಬ್​ ಹಾಗೂ ಕರ್ನಾಟಕದ ಬ್ಯಾಟ್ಸ್​​ಮನ್​​ ತಮ್ಮ ಗೆಳತಿ ಆಶಿತಾ ಸೂದ್​ ಅವರೊಂದಿಗೆ ವಿವಾಹ ಬಂಧನಕ್ಕೆ ಕಾಲಿರಿಸಿದರೆ, ಎಸ್​​ಆರ್​ಹೆಚ್​ ಬೌಲರ್​ ಸಂದೀಪ್​ ಶರ್ಮಾ ಕೂಡ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದರು. ಇದೀಗ ಕೆಕೆಆರ್​ ಆಲ್​​ರೌಂಡರ್​ ನಿತೀಶ್​ ರಾಣಾ ಸರದಿ.

ಕೆಕೆಆರ್​​ನಲ್ಲಿ ಆರಂಭದ ಪಂದ್ಯಗಳಲ್ಲಿ ಅಬ್ಬರಿಸಿದ್ದ ಆಲ್​ರೌಂಡರ್​ ನಿತೀಶ್​ ರಾಣಾ ನಂತರದ ಪಂದ್ಯಗಳಲ್ಲಿ ನಂತರ ಗಾಯದ ಸಮಸ್ಯೆಯಿಂದ ಬಳಲಿದ್ದರು. ಐಪಿಎಲ್​ ಕೊನೆಗೊಂಡ ನಂತರ, ಒಂಟಿಯಾಗಿದ್ದ ನಿತೀಶ್​ ರಾಣಾ ಕೂಡ ಜಂಟಿಯಾಗೋಕೆ ತಯಾರಾಗಿದ್ದಾರೆ.

ತಮ್ಮ ದೀರ್ಘಕಾಲದ ಪ್ರೇಯಸಿ ಸಾಚಿ ಮಾರ್ವಾ ಜೊತೆಗೆ ನಿತೀಶ್​ ರಾಣಾ ಎಂಗೇಜ್​ ಆಗಿದ್ದಾರೆ. ಇಂಟಿರಿಯರ್​ ಆರ್ಕಿಟೆಕ್ಟ್​ ಆಗಿರುವ ಸಾಚಿ ಭಾನುವಾರವಷ್ಟೇ ನಿತೀಶ್​ ಜೊತೆ ಎಂಗೇಜ್​ಮೆಂಟ್​ ಮಾಡಿಕೊಂಡಿದ್ದಾರೆ. ರಾಣಾ ಅವರ ದೆಹಲಿ ಟೀಮ್​ಮೇಟ್ ಧೃವ ಶೋರೆ ಈ ಚಿತ್ರವನ್ನ ಇನ್​​ಸ್ಟಾಗ್ರಾಂಗೆ ಅಪ್​ಲೋಡ್​ ಮಾಡಿ ವಿಶ್​ ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv