ಮೀಡಿಯಾ ಭಯಕ್ಕೆ ಹಾಗೆ ಬಂದು ಹೀಗೆ ಹೋದ ನಿತ್ಯಾನಂದ..!

ರಾಮನಗರ: ರಾಮನಗರದಲ್ಲಿ ಪಂಚಮುಖಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಂದ ವಿವಾದಿತ ಸ್ವಾಮಿ ನಿತ್ಯಾನಂದ ಹಾಗೆ ಬಂದು ಹೀಗೆ ಎಸ್ಕೇಪಾಗಿದ್ದಾನೆ. ಎಲ್ಲಿ ಮಾಧ್ಯಮಗಳ ಕೈಗೆ ಸಿಕ್ಕಿ ಹಾಕಿಕೊಳ್ತೀನೋ ಅನ್ನೋ ಭಯದಲ್ಲಿ ಉದ್ಘಾಟನೆಗೆ ಬಂದ ಕೆಲವೇ ಕ್ಷಣದಲ್ಲಿ ದೇವಾಯಲದ ಹಿಂಬಾಗಿಲಿನಿಂದಲೇ ಕಾಲ್ಕಿತ್ತಿದ್ದಾನೆ.

ಅಂದಹಾಗೆ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನೂತನವಾಗಿ ನಿರ್ಮಾಣಗೊಂಡಿರುವ ಪಂಚಮುಖಿ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮವಿತ್ತು. ಆದ್ರೆ ಕಾರ್ಯಕ್ರಮಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಮಾತ್ರ ನೋ ಎಂಟ್ರಿ. ನಿತ್ಯಾನಂದನ ಶಿಷ್ಯರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಿ ಉದ್ಧಟತನ ಮೆರೆದಿದ್ರು. ಮಾಧ್ಯಮದವರು ಹೋಗುವವರೆಗೂ ನಾನು ಕಾರ್ಯಕ್ರಮಕ್ಕೆ ಬರುವದಿಲ್ಲ ಎಂದು ನಿತ್ಯಾನಂದ ಹಠ ಹಿಡಿದ ಹಿನ್ನೆಲೆಯಲ್ಲಿ ಮಾಧ್ಯಮದವರಿಗೆ ಪ್ರವೇಶ ಕಲ್ಪಿಸಬಾರದೆಂದು ದೇವಸ್ಥಾನದ ಆಡಳಿತ ಮಂಡಳಿ ಮೇಲೆ ಒತ್ತಡ ಹಾಕಿದ್ರು ಎನ್ನಲಾಗ್ತಿದೆ. ಹಾಗೋ ಹೀಗೋ ಕೊನೆಗೂ ಬಂದ ನಿತ್ಯಾನಂದ ದೇವಸ್ಥಾನದ ಉದ್ಘಾಟನೆ ಮಾಡಿ ಮಾಧ್ಯಮದವರ ಕೈಗೆ ಸಿಗದೆ ಹಿಂಬಾಗಿಲಿನಿಂದ ಎಸ್ಕೇಪಾಗಿದ್ದಾನೆ.

Leave a Reply

Your email address will not be published. Required fields are marked *