ನಿತ್ಯಾನಂದ ಸ್ವಾಮಿ ಕಾರ್​ ಡ್ರೈವರ್​ ವಿಚಾರಣೆ

ರಾಮನಗರ: ಬಿಡದಿ ಮಠದ ಸ್ವಾಮಿ ನಿತ್ಯಾನಂದ ರಾಸಲೀಲೆ ಹಾಗೂ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ ಲೆನಿನ್ ಕುರುಪ್ಪನ್ ಅವರನ್ನು ಸುದೀರ್ಘ ವಿಚಾರಣೆ ನಡೆಸಲಾಗಿದೆ.

ಲೆಲಿನ್ ಕುರುಪ್ಪನ್ ನಿತ್ಯಾನಂದನ ಕಾರು ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಇನ್ ಕ್ಯಾಮರಾ ಪ್ರೊಸಿಡಿಂಗ್ ನಡೆಸಿದ ರಾಮನಗರ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ವಿಚಾರಣೆ ನಡೆಸಿದೆ. ಪ್ರಕರಣದ A1 ಆರೋಪಿ ನಿತ್ಯಾನಂದ, A3 ಆರೋಪಿ ಧನಶೇಖರನ್, A5 ಆರೋಪಿ ರಾಗಿಣಿ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಗೋಪಾಲಕೃಷ್ಣ ರೈ ವಿಚಾರಣೆಗೆ ತಪ್ಪಿಸಿಕೊಳ್ಳದಂತೆ ನಿತ್ಯಾನಂದಗೆ ಸೂಚನೆ ನೀಡಿ ಇದೇ ತಿಂಗಳ 16ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.