ನಿತ್ಯಾನಂದ ಸ್ವಾಮಿಯ ಕೇಸ್ ಮಾರ್ಚ್​ 26 ಕ್ಕೆ ಮುಂದೂಡಿಕೆ

ರಾಮನಗರ: ನಿತ್ಯಾನಂದ ಸ್ವಾಮಿಯ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಲಯ ಮಾರ್ಚ್ 26ಕ್ಕೆ ವಿಚಾರಣೆಯನ್ನು ಮುಂದೂಡಿದೆ. ನಿನ್ನೆ ಹೈಕೋರ್ಟ್​ ಏಕ ಸದಸ್ಯ ಪೀಠ ವಿಚಾರಣೆಗೆ ತಡೆಯಾಜ್ಞೆ ನೀಡಿತ್ತು. ರಾಮನಗರ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಆದೇಶವನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ಇಂದು ನಿತ್ಯಾನಂದ ಹಾಗೂ ಆತನ ಶಿಷ್ಯಂದಿರು ಕೋರ್ಟ್ ಗೆ ಹಾಜರಾಗಿದ್ದರು.
ಆರೋಪ ನಿಗದಿಗೆ ರಾಮನಗರ ಕೋರ್ಟ್ ಈ ಮೊದಲು ನಿರ್ಧರಿಸಿತ್ತು. ಅದನ್ನು ಪ್ರಶ್ನಿಸಿ ನಿತ್ಯಾನಂದ ಹಾಗೂ ಆತನ ಶಿಷ್ಯಂದಿರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ಇತ್ಯರ್ಥವಾಗೋವರೆಗೂ ಆರೋಪ ನಿಗದಿ ಮಾಡದಂತೆ ನಿನ್ನೆ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು.

Leave a Reply

Your email address will not be published. Required fields are marked *