ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಐಪಿಎಲ್​ ಟ್ರೋಫಿಗೆ ಪೂಜೆ..!

ಮುಂಬೈ ಇಂಡಿಯನ್ಸ್ ಐಪಿಎಲ್​ 12ರ ಕಿರೀಟ ಮುಡಿಗೇರಿಸಿಕೊಂಡಿದ್ದಾಯ್ತು.ಈ ಮೂಲಕ ಐಪಿಎಲ್​ನಲ್ಲಿ ಅತಿಹೆಚ್ಚು ನಾಲ್ಕು ಬಾರಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ತಂಡ ಹೆಗ್ಗಳಿಕೆಗೂ ನೀತಾ ಅಂಬಾನಿ ಒಡೆತನದ ತಂಡ ಪಾತ್ರವಾಗಿದ್ದಾಯ್ತು.ಇದೀಗ ಟ್ರೋಫಿ ಹಿಡಿದುಕೊಂಡು, ನೀತಾ ಅಂಬಾನಿ ಟೆಂಪಲ್ ರನ್ ಮಾಡುತ್ತಿದ್ದಾರೆ.ಮೊನ್ನೆ ತಮ್ಮ ಮನೆಯಲ್ಲಿರುವ ಶ್ರೀ ಕೃಷ್ಣನ ವಿಗ್ರಹದ ಮುಂದೆ ಟ್ರೋಫಿ ಇಟ್ಟು ನಮಿಸಿದ್ದ ನೀತಾ,ಇಂದು ಮುಂಬೈನ ಪ್ರಸಿದ್ಧ ಶ್ರೀ ಸಿದ್ಧಿವಿನಾಯಕನ ದೇವಸ್ಥಾನಕ್ಕೆ ಟ್ರೋಫಿಯೊಂದಿಗೆ ತೆರಳಿದ್ರು.ತಮ್ಮ ತಂಡವನ್ನ ಗೆಲ್ಲಿಸಿದ್ದಕ್ಕಾಗಿ ಗಣೇಶನಿಗೆ ವಂದಿಸಿದ್ರು.ಗಣೇಶನ ಮುಂದೆ ಟ್ರೋಫಿ ಇರಿಸಿ ವಿಶೇಷ ಪೂಜೆ ನೆರವೇರಿಸಿದ್ರು