‘ಕಾಂಗ್ರೆಸ್​ ನೀರಿನಿಂದ ಹೊರಗಿರುವ ಮೀನು, ಸ್ವಂತ ಬಲದಲ್ಲಿ ಏನೂ ಮಾಡಲು ಸಾಧ್ಯವಿಲ್ಲ’

ಬೆಂಗಳೂರು: ಕಾಂಗ್ರೆಸ್ ನೀರಿನಿಂದ ಹೊರಗಿರುವ ಮೀನು, ಸ್ವಂತ ಬಲದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ ಅಂತಾ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಲೇವಡಿ ಮಾಡಿದ್ದಾರೆ.

ನೆಲಮಂಗಲದಲ್ಲಿ ನಡೆದ ಸಂವಾದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯ 5 ವರ್ಷಗಳಲ್ಲಿ ಭಾರತ ಹೆಚ್ಚು ಪ್ರಭಾವಗಳಿಸಿದೆ. ಪ್ರಪಂಚದ ಎಲ್ಲೆಡೆ ಭಾರತದ ಆರ್ಥಿಕತೆ ಬಗ್ಗೆ ಮಾತನಾಡುವಂತಾಗಿದೆ. ಇವತ್ತು ಮೋದಿ ನಾಯಕತ್ವದಲ್ಲಿ ದೇಶ ಎಲ್ಲಿಗೆ ಸಾಗುತ್ತಿದೆ ಎಂದು ನಿಮಗೆ ತಿಳಿದಿದೆ. 5 ವರ್ಷದ ಹಿಂದೆ ಭಾರತ ಭ್ರಷ್ಟಾಚಾರದ ದೇಶವಾಗಿತ್ತು. ಆದರೆ ಕಳೆದ 5ವರ್ಷದಿಂದ ದೇಶ ಬದಲಾಗಿದೆ ಎಂದರು.

2014ರ ದಿನಗಳು ಕತ್ತಲೆಯಂತಿದ್ದವು, ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿತ್ತು. 2019ರ ದಿನಗಳಲ್ಲಿ ಬದಲಾಬಣೆಯ ಗಾಳಿ ಬೀಸಿದೆ. 2014ರಲ್ಲಿ ಗುಜರಾತಿನವರು ದೆಹಲಿಯಲ್ಲಿ ಕೆಲಸ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. 2014ರಲ್ಲಿ ಭ್ರಷ್ಟಾಚಾರ, ಅಕ್ರಮ ಅವ್ಯವಹಾರದಿಂದ ತುಂಬಿತ್ತು. ಮೋದಿ ಪ್ರಧಾನಿ ಆಗುವ ಮುನ್ನ ಹಲವರು ಲೇವಡಿ ಮಾಡಿದ್ದರು. ಮೋದಿ ಗುಜರಾತ್​ಗೆ ಮಾತ್ರ ಸೀಮಿತ. ದೆಹಲಿ ರಾಜಕೀಯಕ್ಕೆ ಮೋದಿ ನಾಲಾಯಕ್. ಸಂಸದನಾಗುವುಕ್ಕೂ ಮೋದಿ ಅರ್ಹನಲ್ಲ ಎಂದು ಲೇವಡಿ ಮಾಡುತ್ತಿದ್ದರು.

ಆದರೆ ಇಂದು ಇಡೀ ವಿಶ್ವವೇ ಮೋದಿಯನ್ನು ಮೆಚ್ಚಿಕೊಂಡಿದೆ. ಲೋಕಸಭೆಯಲ್ಲಿ ಅಧಿಕ ಬಹುಮತ ನಮಗಿದೆ. ದೇಶದಲ್ಲಿ ಬ್ಯಾಂಕಿಂಗ್‌ ಕ್ಷೇತ್ರ ಅಧಿಕವಾಗಿ ಬೆಳೆಯುತ್ತಿದೆ. ಮೊಬೈಲ್‌ ಮೂಲಕ ನೀವು ಸಾಲ ಪಡೆಯಬಹುದಾಗಿದೆ. ಯುಪಿಎ ಸರ್ಕಾರದಲ್ಲಿ ಸಾಲ ಸೌಲಭ್ಯಗಳಿಗೆ ಸಾವಿರಾರು ನಿಯಮಗಳಿದ್ದವು. ರಾಜ್ಯ ಸರ್ಕಾರ ಸಾಲಮನ್ನಾ ಮಾಡುವ ವಿಚಾರದಲ್ಲಿ ನಾಟಕವಾಡುತ್ತಿದೆ. ಮೋದಿಗೆ ಹೋಲಿಕೆಯಾಗುವವರು ಯಾರಿದ್ದಾರೆ ವಿರೋಧ ಪಕ್ಷದಲ್ಲಿ? ಮಹಾ ಘಟಬಂದನ್‌ನಲ್ಲಿ ಇರುವವರು ಕಿತ್ತಾಡಿಕೊಳ್ಳುತ್ತಾರೆ. ಯಾರು ಯಾರಿಗೆ ಬೇಕು ನಾಯಕತ್ವ ಎನ್ನುವ ವಿಚಾರದಲ್ಲಿ ಬಡಿದಾಡಿಕೊಳ್ಳುತ್ತಾರೆ. ಅಂತಹವರು ದಿನದ 18 ಗಂಟೆ ಕೆಲಸ ಮಾಡುವವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನೀರಿನಿಂದ ಹೊರಗಿರುವ ಮೀನು. ಸ್ವಂತ ಬಲದಿಂದ ಏನನ್ನೂ ಮಾಡಲು ಸಾಧ್ಯವಿಲ್ಲ. ನರೇಂದ್ರ ಮೋದಿಗೆ ಯಾರು ಸಮಾನರಾಗಿದ್ದಾರೆ? 24×7, 365 ದಿನಗಳು ಯಾರು ಕೆಲಸ ಮಾಡುವವರಿದ್ದಾರೆ ದೇಶದಲ್ಲಿ? ಇಡಿ ವಿಪಕ್ಷಗಳಲ್ಲಿ ಯಾರೊಬ್ಬರೂ ಮೋದಿಗೆ ಸಮಾನರಿಲ್ಲ. ಮಹಾಘಟಬಂಧನ್​ ನಾಯಕರು ಆಧಾರ ರಹಿತ ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್​ ಸ್ಥಿತಿ ನೀರಿನಿಂದ ಹೊರಬಂದ ಮೀನಿನಂತಾಗಿದೆ. ಅಧಿಕಾರವಿಲ್ಲದೇ ಬದುಕಲು ಕಾಂಗ್ರೆಸ್​​ಗೆ ಆಗ್ತಿಲ್ಲ ಎಂದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv