ಲಂಡನ್​ನಿಂದ ಬ್ರುಸೆಲ್ಸ್​​ಗೆ ಕಾಲ್ಕಿತ್ತ ನೀರವ್ ಮೋದಿ

ಲಂಡನ್: ಲಂಡನ್​ನಲ್ಲಿ ಅಡಗಿ ಕುಳಿತುಕೊಂಡಿರುವ ನೀರವ್​ ಮೋದಿ ಬ್ರುಸೆಲ್ಸ್​​ಗೆ ಪಲಾಯನ ಮಾಡಿದ್ದಾನೆ. ನೀರವ್​ ಮೋದಿ ಲಂಡನ್​ಲ್ಲಿದ್ದು, ಅಲ್ಲೇ ಆಶ್ರಯ ಬೇಡುತ್ತಿದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ಸಿಬಿಐ ಈ ಬಗ್ಗೆ ಬ್ರಿಟಿಷ್ ಸರ್ಕಾರದಿಂದ ಖಚಿತತೆಗಾಗಿ ಕಾಯುತಿತ್ತು. ಇದರಿಂದ ಎಚ್ಚೆತ್ತ ನೀರವ್ ಮೋದಿ ಈಗ ಬ್ರುಸೆಲ್ಸ್​​ಗೆ ಎಸ್ಕೇಪ್ ಆಗಿದ್ದಾನೆ ಅಂತ ಮಾಹಿತಿ ಲಭ್ಯವಾಗಿದೆ.

ತನ್ನ ಸಿಂಗಪೂರ್ ಪಾಸ್​ಪೋರ್ಟ್ ನೆರವಿನಿಂದ ಬೆಲ್ಜಿಯಂ ದೇಶದ ಬ್ರುಸೆಲ್ಸ್​ ನಗರಕ್ಕೆ ಹಾರಿದ್ದಾನೆ ಅಂತ ತಿಳಿದುಬಂದಿದೆ. ಡೈಮಂಡ್​ ವ್ಯಾಪಾರಿಯಾಗಿರುವ ನೀರವ್​ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ಗೆ 11000 ಕ್ಕೂ ಹೆಚ್ಚು ಕೋಟಿ ರೂಪಾಯಿ ಮೋಸ ಮಾಡಿದ ಪ್ರಕರಣದಲ್ಲಿ ಪ್ರಮುಖ ಆರೋಪಿ. ಸದ್ಯ ಈತನ ಬಂಧನಕ್ಕಾಗಿ ಸಿಬಿ ಕಸರತ್ತು ನಡೆಸ್ತಿದ್ದು, ಸಿಬಿಐನ ಮನವಿ ಮೇರೆಗೆ ಮುಂಬೈನ ವಿಶೇಷ ಕೋರ್ಟ್​ ನೀರವ್ ಮೋದಿ ವಿರುದ್ಧ ಇತ್ತೀಚಿಗೆ ಜಾಮೀನು ರಹಿತ ವಾರೆಂಟ್ ಕೂಡ ಹೊರಡಿಸಿತ್ತು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv