ಮಾರಕ ನಿಫಾ ವೈರಸ್​ನ ಕಂಡುಹಿಡಿಯೋದು ಹೇಗೆ ಗೊತ್ತಾ?

ಬೆಂಗಳೂರು: ಯಾವುದೇ ಕಾಯಿಲೆಯನ್ನಾದ್ರು ಕನ್ಫರ್ಮ್ ಮಾಡ್ಕೋಬೇಕಾದ್ರೆ ನಿರ್ದಿಷ್ಟ ಟೆಸ್ಟ್ ಅಂತ ಇರತ್ತೆ. ಹಾಗೇನೆ ನಿಫಾ ವೈರಸ್ ಅಟ್ಯಾಕ್ ಆಗಿದೆ ಅಂತ ತಿಳ್ಕೊಳ್ಳೋಕೆ ಕೂಡ ಟೆಸ್ಟ್ ಅಂತ ಇದೆ. ಅವು ಯಾವುದೆಂದ್ರೆ- ರೊಗಿಯ ಗುಣಲಕ್ಷಣಗಳನ್ನ ಆಧರಿಸಿ ಟೆಸ್ಟ್ ಗಳನ್ನ ಮಾಡಲಾಗುತ್ತದೆ.

ಮೊದಲ ಹಂತದಲ್ಲಿ ವೈರಸ್ ಐಸೋಲೇಷನ್ ಟೆಸ್ಟ್ ಮತ್ತು ರಿಯಲ್ ಪಾಲಿಮರೇಸ್ ಟೆಸ್ಟ್ (ಆರ್ಟಿ-ಪಿಸಿಆರ್)ನ್ನು ಗಂಟಲು ಮತ್ತು ಮೂಗಿನ ಪ್ಲ್ಯೂಯಿಡ್, ಸೆರೆಬ್ರೊಸ್ಪೈನಲ್ ಪ್ಲ್ಯೂಯಿಡ್, ಯೂರಿನ್ ಟೆಸ್ಟ್, ಮತ್ತು ರಕ್ತ ಪರೀಕ್ಷೆಯನ್ನ ಮಾಡಲಾಗುತ್ತದೆ.
ನಂತರದಲ್ಲಿ ಐಜಿಜಿ ಮತ್ತು ಐಜಿಎಮ್ ಆಂಟಿಬಾಡಿ ಪರೀಕ್ಷೆಯನ್ನ ಮಾಡಲಾಗುತ್ತದೆ. ಇನ್ನು ಮಾರಣಾಂತಿಕ ಪ್ರಕರಣಗಳಲ್ಲಿ ಶವಪರೀಕ್ಷೆಯ ಸಮಯದಲ್ಲಿ ಇಮ್ಯುನೊ ಹಿಸ್ಟೊಕೆಮಿಸ್ಟ್ರಿ ಎಂಬ ಪರೀಕ್ಷೆಯನ್ನ ರೋಗ ನಿರ್ಣಯವನ್ನು ಖಚಿತಪಡಿಸಲು ಏಕೈಕ ಮಾರ್ಗವಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv