ಶಾಸಕ ಬಾಲಕೃಷ್ಣಗೆ ಹೆಚ್‌ಡಿಕೆ ಪುತ್ರ ನಿಖಿಲ್‌ ಸವಾಲ್‌!

ಮಾಗಡಿ: ಮಾಗಡಿಯ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣಗೆ ಹೆಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್‌ ಸವಾಲ್ ಹಾಕಿದ್ದಾರೆ.  ನಿಖಿಲ್ ಕುಮಾರಸ್ವಾಮಿ ಸಿಡಿ ನನ್ನ ಬಳಿ ಇದೆ ಎಂಬ ಮಾಗಡಿ ಶಾಸಕ ಬಾಲಕೃಷ್ಣ ಹೇಳಿಕೆ ಬಗ್ಗೆ  ಪ್ರಚಾರದ ವೇಳೆ ಅವರು ಪ್ರತಿಕ್ರಿಯಿಸಿದರು. ‘ಜಾತಕನಾ? ತಾಕತ್ತಿದ್ದರೆ ಮಾಡೋಕೆ ಹೇಳ್ರೀ ರೀ. ನಾನ್ ಯಾವಂಗ್‌ ಹೆದರಲೀ. ನಾನೇನ್ ಮಾಡಿದ್ದೀನಿ. ಅವನ ಯೋಗ್ಯತೆಗೆ ಆರೂವರೆ ಕೋಟಿ ಜನತೆ, ಇವರ ಯೋಗ್ಯತೆ ಕಂಡಿದ್ದಾರೆ. ನನಗೆ ಗೊತ್ತಿದೆ. ಇವರ ಯಾವ ರೀತಿ ಬೆನ್ನಿಗೆ ಚೂರಿ ಚುಚ್ಚಿ ಹೋಗಿದ್ದಾರೆ.  ಬರೆದುಕೊಳ್ಳಿ ರಾಜಕೀಯದಿಂದ ನಿವೃತ್ತಿ ಹೊಂದಬೇಕಾಗುತ್ತೆ. ಈ ಬಾರಿ ಮಾಗಡಿ ಚುನಾವಣೆ ಆದ್ಮೇಲೆ ಇದೇ ಬಾಲಕೃಷ್ಣ ಅದೇನ್ ರಾಜಕಾರಣ ಮಾಡ್ತಾರೆ ಅಂತಾ ನಾನು ನೋಡ್ತೀನಿ.’ ಎಂದು ನಿಖಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.