‘‘ಮೊನ್ನೆ ಸಿದ್ದರಾಮಣ್ಣ.. ಇಂದು ಯತೀಂದ್ರಣ್ಣ ನಂಗೆ ಶಕ್ತಿ ತುಂಬುತ್ತಿದ್ದಾರೆ’’

ಮಂಡ್ಯ: ಡಾ.ಯತೀಂದ್ರ ಅಣ್ಣ ಅವ್ರು ನನಗೆ ಶಕ್ತಿ ತುಂಬೋಕೆ ಬಂದಿದ್ದಾರೆ. ಮೊನ್ನೆ ಸಿದ್ದರಾಮಣ್ಣ ಬೆಂಬಲವಾಗಿ ಬಂದಿದ್ರು. ಈಗ ಯತೀಂದ್ರ ಅಣ್ಣ ಬಂದಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ ಅವರು, ಏ.16 ರಂದು ಮಂಡ್ಯ ಟೌನ್‌ನಲ್ಲಿ ಕೊನೆ ದಿನದ ಪ್ರಚಾರ ಮುಗಿಸೋಣ ಅಂದ್ಕೊಂಡಿದ್ದೇವೆ. ದಿನೇ ದಿನೇ ನನ್ನ ಆತ್ಮವಿಶ್ವಾಸ ಹೆಚ್ಚಾಗುತ್ತಿದೆ. ಜನರ ಅಭಿಮಾನ ‌ಪ್ರೀತಿ ನೋಡ್ತಿದ್ರೆ ಖುಷಿ ಆಗ್ತಿದೆ. ಜನ ನನ್ನ ಕೈ ಹಿಡಿದೇ ಹಿಡೀತಾರೆ ಅನ್ನೋ ಆತ್ಮವಿಶ್ವಾಸ ಮೂಡಿದೆ ಎಂದರು.


firstNewsKannada  Instagram: firstnews.tv  Facebook: firstnews.tv  Twitter: firstnews.tv