ನಿಖಿಲ್ ಕುಮಾರಸ್ವಾಮಿ, ಭವಾನಿ ರೇವಣ್ಣ? ಯಾರಾದ್ರೂ ಓಕೆ..!

ತುಮಕೂರು: ಮುಂಬರುವ ಸಂಸತ್ ಚುನಾವಣೆಯಲ್ಲಿ ತುಮಕೂರಿನಿಂದ‌ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸುವಂತೆ ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಸಿ.ಚೆನ್ನಿಗಪ್ಪ ಜೆಡಿಎಸ್ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, 2019ರ ಸಂಸತ್ ಚುನಾವಣೆಗೆ ನಿಖಿಲ್ ಕುಮಾರಸ್ವಾಮಿಯನ್ನು ಸ್ಪರ್ಧೆಗೆ ಆಹ್ವಾನಿಸಿದ್ದೀವಿ, ನಮ್ಮ ಕ್ಷೇತ್ರಕ್ಕೆ ಭವಾನಿ ರೇವಣ್ಣ ಬಂದ್ರು ಅಡ್ಡಿ ಇಲ್ಲಾ ಅಂತಾ ಹೇಳಿದ್ದಾರೆ. ಇದು ಜಿಲ್ಲಾ ಜೆಡಿಎಸ್ ಮುಖಂಡರ ಅಭಿಪ್ರಾಯ, ಮುಂದಿನ ತೀರ್ಮಾನ ವರಿಷ್ಠರಿಗೆ ಬಿಟ್ಟಿದ್ದು ಅಂತಾನೂ ಹೇಳಿದ್ರು.
ಮಾಜಿ ಸಿಎಂ ಸಿದ್ದರಾಮಯ್ಯ ಅವ್ರದು ಖಡಕ್ ಮಾತು, ಆದ್ರೆ ಹೂವಿನಂತ ಮನಸ್ಸು ಅಂತಾ ಹೇಳಿದ ಚೆನ್ನಿಗಪ್ಪ ಕುಮಾರಣ್ಣಾವ್ರು ಗೊತ್ತಲ್ಲಾ.. ಕೊಟ್ರೆ ವರ, ಇಟ್ರೆ ಶಾಪ! ಯಾವಾಗ್ಲೂ ಸತ್ಯ ಪ್ರಾಮಾಣಿಕತೆಗೆ ಬೆಲೆ ಕೊಡೋಂಥವರು. ಎಲ್ಲಾ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಸೌಜನ್ಯಮೂತಿ೯ ಅಂದ್ರೆ ಕುಮಾರಣ್ಣ ಅಂತಾ ಮಾಜಿ ಹಾಗೂ ಹಾಲಿ ಮುಖ್ಯಮಂತ್ರಿಗಳನ್ನು ಹಾಡಿ ಹೊಗಳಿದ್ದಾರೆ.
ಶಾಸಕ ಗೌರಿಶಂಕರ್​ಗೆ ಸಚಿವ ಸ್ಥಾನ ಕೊಡಬೇಡಿ. ನಮ್ಮ ಹುಡ್ಗ ಇನ್ನೂ ಚಿಕ್ಕವನು ಅಂತಾ ವರಿಷ್ಠರಿಗೆ ಹೇಳಿದ್ದು ನಾನೇ. ಗೌರಿಶಂಕರ್​ಗೆ ನಿಗಮ ಮಂಡಳಿ ಕೊಡ್ತೀನಿ ಅಂತಾ ವರಿಷ್ಠರು ಹೇಳಿದ್ದಾರೆ ಅಂತಾ ಚೆನ್ನಿಗಪ್ಪ ಇದೇ ಸಂದರ್ಭದಲ್ಲಿ ತಿಳಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv