‘ನಿಖಿಲ್ ಎಲ್ಲಿದ್ದೀಯಪ್ಪಾ..?’ ಚಿತ್ರ ಮಾಡಿದ್ರೆ ನಾನು ಆ್ಯಕ್ಟ್​ ಮಾಡ್ತೀನಿ: ತಾರಾ

ಬೆಳಗಾವಿ: ನಿಖಿಲ್ ಎಲ್ಲಿದ್ದೀಯಪ್ಪ‌ಾ? ಸಿನಿಮಾ ಮಾಡಬಾರದು ಅಂತೇನಿಲ್ಲ. ಒಳ್ಳೆಯ ಸಿನಿಮಾ ಆಗಿರಬೇಕು. ನಟನೆ ಮಾಡಲು ನಾನು ರೆಡಿಯಾಗಿದ್ದೇನೆ ಎಂದು ಬಿಜೆಪಿ ಮಾಜಿ ಎಂಎಲ್‌ಸಿ ತಾರಾ ಹೇಳಿದ್ದಾರೆ. ‘ನಿಖಿಲ್ ಎಲ್ಲಿದ್ದೀಯಪ್ಪಾ..’ ಅನ್ನೋ ಚಿತ್ರ ಮಾಡಿದ್ರೆ ನೀವು ಆ್ಯಕ್ಟ್​ ಮಾಡುತ್ತಿರಾ ಅನ್ನೋ ಪ್ರಶ್ನೆಗೆ ನಗರದಲ್ಲಿ ಮಾತನಾಡಿದ ಅವರು, ನನಗೆ ಪಾತ್ರ ಚೆನ್ನಾಗಿ ಅನ್ಸಿದ್ರೆ, ಕಥಾಹಂದರ ಇಷ್ಟ ಆದ್ರೆ ಖಂಡಿತವಾಗಿ ನಾನು ಅಭಿನಯಿಸುತ್ತೇನೆ. ಪಾತ್ರ ಹೇಗಿದೆ ಎಂಬುದನ್ನು ನೋಡ್ತಿನಿ. ನಿಖಿಲ್ ಎಲ್ಲಿದೀಯಪ್ಪಾ ಎಂಬ ಟೈಟಲ್ ಇದ್ರೂ ತೊಂದರೆ ಇಲ್ಲ. ಚಿತ್ರಕ್ಕೆ ನಿಖಿಲ್‌ ನಾಯಕ ನಟನಾದರೂ ನಟನೆ ಮಾಡಲು ಸಿದ್ದ. ಚಿತ್ರದ ನಿರ್ದೇಶಕರು ಕಥೆ ಹಂದರ ಹೇಗೆ ಕಟ್ಟಿದ್ದಾರೆ ಎಂಬುದು ಮುಖ್ಯ. ಒಳ್ಳೆಯ ನಿರ್ದೇಶಕ, ಕಥೆ ಮತ್ತು ಸಂಭಾವ್ಯ ಸಿಕ್ಕರೆ ಚಿತ್ರ ಮಾಡುತ್ತೇನೆ ಅಂತಾ ತಾರಾ ಹೇಳಿದ್ದಾರೆ. ಸಿನಿಮಾ ನಟರ ಕುರಿತು ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ವೈಯಕ್ತಿಕವಾಗಿ ಮಾತನಾಡಬಾರದು ಎಂದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv