ನಿಖಿಲ್ ಕುಮಾರಸ್ವಾಮಿ​ ಕಾಲಿಗೆ ಏಟು, ಪ್ರಚಾರಕ್ಕೆ ಇಂದು ವಿರಾಮ

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾಸ್ವಾಮಿ ಇಂದು ಪ್ರಚಾರ ಮಾಡುತ್ತಿಲ್ಲ. ನಿನ್ನೆ ರಾತ್ರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ  ಪ್ರಚಾರ ಮಾಡುವ ವೇಳೆ ಕಾರ್ಯಕರ್ತರ ತಳ್ಳಾಟ-ನೂಕಾಟದಲ್ಲಿ ನಿಖಿಲ್ ಕಾಲಿಗೆ ಪೆಟ್ಟು ಬಿದ್ದಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದಿಂದ ನಿಖಿಲ್​ ಇಂದು ವಿರಾಮ ಪಡೆದಿದ್ದಾರೆ. ತಡರಾತ್ರಿ ಬೆಂಗಳೂರಲ್ಲಿ ಆಸ್ಪತ್ರೆಗೆ ತೋರಿಸಿ ವೈದ್ಯರ ಸಲಹೆ ಮೇಲೆ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಇವತ್ತು ನಾಗಮಂಗಲದಲ್ಲಿ ನಡೆಯಲಿರುವ ದೇವೇಗೌಡ- ಸಿದ್ದರಾಮಯ್ಯ ಜಂಟಿ ಸಮಾವೇಶದಲ್ಲಿ ನಿಖಿಲ್ ಭಾಗಿಯಾಗಬೇಕಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv