ಇಸ್ಪೀಟ್ ಆಡೋದ್ರಿಂದ ರೈತರಿಗೆ ಸಾಲ ಬಂತು: ನಿಜಗುಣಾನಂದ ಸ್ವಾಮೀಜಿ

ಬಾಗಲಕೋಟೆ: ಇಸ್ಪೀಟ್ ಆಡೋದ್ರಿಂದ ಸಾಲ ಬಂತು. ವ್ಯಸನದಿಂದ ಸಾಲ ಬಂತು. ದೊಡ್ಡಸ್ತಿಕೆಯಿಂದ ಸಾಲ ಬಂತು. ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡ್ಲಿ ಅಂತಾ ದೇವ್ರು ಅಂತಾನೆ ಎಂದು ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬದಾಮಿ ಸ್ಮಶಾನದಲ್ಲಿ ನಡೆದ ‘ಮರಣವೇ ಮಹಾನವಮಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರು ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಮಾಡಲಿ ಎಂದು ದೇವರ ಮುಂದೆ ಹೇಳೋದು. ದೇವರು ಕೇಳ್ತಾನೆ ಮಗನ(ರೈತ) ನಿನಗ ಸಾಲ ಮಾಡು ಅಂದೋರು ಯಾರು? ಎಂದು ಪ್ರಶ್ನಿಸಿದ್ರು.
ದೇವ್ರು ಬಹಳ ಡೇಂಜರ್ ಅದಾನ, ನಾಲ್ಕು ಪ್ಯಾಂಟ್-ಶರ್ಟ್, 1 ರೊಟ್ಟಿ, ಒಂದಿಷ್ಟು ಲೋಟಾ ಹಾಲು, ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ. ಆಯಸ್ಸು 60 ಆದ್ಮೇಲೆ ಶುಗರ್, ಬಿಪಿ ನಿನಗ (ರೈತ) ಸಾಲ ಯಾಕ ಬಂತು..? ಅಂತಾ ಪ್ರಶ್ನಿಸಿದರು. ದೇವರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾಗಿದ್ರೆ, ರೈತರ ಸಾಲ ಮನ್ನಾಕ್ಕೂ ಪರಿಹಾರ ಕೊಡಲಿ ನೋಡೋಣ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: firstnews.tv