ನಿಜಗುಣಾನಂದ ಸ್ವಾಮೀಜಿ ಇಡೀ ರೈತ ಕುಲಕ್ಕೆ ಅಪಮಾನ ಮಾಡಿದ್ದಾರೆ

ಬಾಗಲಕೋಟೆ: ನಿಜಗುಣಾನಂದ ಸ್ವಾಮೀಜಿಯ ನಾಲಿಗೆ ಶುದ್ಧವಿಲ್ಲ. ಅವರು ಇಡೀ ರೈತ ಕುಲಕ್ಕೆ ಅಪಮಾನ ಮಾಡಿದ್ದಾರೆ, ಎಂದು ಧಾರವಾಡದ ಮನ್ಸೂರು ಮಠದ ಬಸವರಾಜದೇವರು ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ಅವರು, ರೈತ ವಿರೋಧಿ ಹೇಳಿಕೆ ನೀಡುವ ಮೂಲಕ ಸ್ವಾಮಿಜಿ ತಾವು ಉಣ್ಣುವ ಅನ್ನಕ್ಕೆ ಮಹಾದ್ರೋಹ ಬಗೆಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ರೈತರು ಸಾಲದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ನಿಜಗುಣಾನಂದ ಸ್ವಾಮೀಜಿ ರೈತರು ಇಸ್ಪೀಟ್, ಜೂಜು, ಮೋಜು ಮಸ್ತಿ ಹಾಗೂ ಮದ್ಯವ್ಯಸನದಿಂದ ಸಾಲ ಮಾಡಿದ್ದಾರೆ ಅಂತಾರೆ.
‘ಸ್ವಾಮೀಜಿಗಳಿಗೆ ರೈತರ ಕಷ್ಟ, ನೋವುಗಳ ಬಗ್ಗೆ ಅರಿವಿಲ್ಲ’
ಆಚಾರಶೀಲರಾಗಿ, ಧಾರ್ಮಿಕ ಮುಖಂಡರಾಗಿ ಈ ರೀತಿ ಮಾತಾಡೋದು ಮಹಾ ಅಪರಾಧ ಎಂದಿರುವ ಬಸವರಾಜದೇವರು, ನಿಜಗುಣಾನಂದ ಶ್ರೀ ಬಸವಧರ್ಮೀಯರು, ಬಸವಧರ್ಮಕ್ಕೆ ಇದು ವಿರೋಧ ಕ್ರಮ. ಸ್ವಾಮೀಜಿಗಳಿಗೆ ರೈತರ ಕಷ್ಟ, ನೋವುಗಳ ಬಗ್ಗೆ ಅರಿವಿಲ್ಲ. ರೈತರು,ಮಹಿಳೆಯರ,ಬಡವರ ಕಷ್ಟಗಳ ಬಗ್ಗೆ ಸ್ವಾಮೀಜಿಗಳಿಗೆ ಅರಿವು ಇರಬೇಕು ಎಂದಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: firstnews.tv