ತಾನು ನಿಜಕ್ಕೂ ಶ್ರೀಮಂತನಾ ಅಂತ ಕನ್ಫರ್ಮ್​​​ ಮಾಡ್ಕೊಳ್ಳೋಕೆ ₹69 ಕೋಟಿ ಡ್ರಾ ಮಾಡಿದ

ನೈಜೀರಿಯಾ: ಯಾವುದೇ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಅನ್ನೋದು ಆ ದೇಶದವ್ರಿಗೆ ಸಾಮಾನ್ಯವಾಗಿ ಗೊತ್ತಿರುತ್ತೆ. ಆದ್ರೆ ಆಫ್ರಿಕಾದ ಅತ್ಯಂತ ಶ್ರೀಮಂತ ವ್ಯಕ್ತಿಗೆ ತಾನು ನಿಜಕ್ಕೂ ಅಷ್ಟೊಂದು ಶ್ರೀಮಂತನಾ ಎಂಬ ಡೌಟ್ ಸ್ವತಃ ಆತನಿಗೇ​ ಬಂದಿತ್ತು ಅಂದ್ರೆ ನೀವು ನಂಬಲೇಬೇಕು. ಹೌದು, ಆಫ್ರಿಕಾದ ಆಗರ್ಭ ಶ್ರೀಮಂತ ಅಲಿಕೋ ಡಾಂಗೋಟೆ ಒಮ್ಮೆ ತಾನು ನಿಜಕ್ಕೂ ಶ್ರೀಮಂತನಾ ಅಂತ ಕನ್ಫರ್ಮ್​​ ಮಾಡಿಕೊಳ್ಳೋಕೆ 10 ಮಿಲಿಯನ್ ಡಾಲರ್​​( ಅಂದಾಜು ₹69 ಕೋಟಿ) ಹಣವನ್ನ ಡ್ರಾ ಮಾಡಿದ್ದರಂತೆ.

ನೈಜೀರಿಯಾದಲ್ಲಿ ಸಿಮೆಂಟ್​ ಹಾಗೂ ಇತರೆ ವಿವಿಧ ತಯಾರಿಕಾ ಕಂಪನಿಗಳನ್ನು ಹೊಂದಿರೋ ಡಾಂಗೋಟೆ, ಈ ಬಗ್ಗೆ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ವೇಳೆ ಹೇಳಿದ್ದಾರೆ. 10 ಮಿಲಿಯನ್ ಡಾಲರ್​ ಹಣವನ್ನ ಡ್ರಾ ಮಾಡಿ, ಕಾರಿನಲ್ಲಿ ತೆಗೆದುಕೊಂಡು ಹೋಗಿ ನನ್ನ ರೂಮಿನಲ್ಲಿ ಇಟ್ಟುಕೊಂಡಿದ್ದೆ. ಆ ಹಣವನ್ನ ನೋಡಿದ ನಂತರ ನನಗೆ ನಂಬಿಕೆ ಬಂತು, ನನ್ನ ಬಳಿ ಇಷ್ಟೊಂದು ಹಣ ಇದೆ ಅಂತ. ಮರುದಿನ ಅದನ್ನ ಬ್ಯಾಂಕ್​​ಗೆ ವಾಪಸ್​ ತೆಗೆದುಕೊಂಡು ಹೋದೆ ಎಂದು ಡಾಂಗೋಟೆ ತಿಳಿಸಿದ್ದಾರೆ.

ನಾವು ಯುವಕರಾಗಿದ್ದಾಗ ಮೊದಲನೇ ಮಿಲಿಯನ್ ತುಂಬಾ ಮುಖ್ಯವಾಗುತ್ತದೆ. ಆಮೇಲೆ ನಂಬರ್​ಗಳ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳುವುದಿಲ್ಲ ಅಂತ ಡಾಂಗೋಟೆ ಹೇಳಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv