ಕನ್ನಡ ಸಂಘಟನೆಗಳಿಂದಲೇ ಕನ್ನಡಕ್ಕೆ ಧಕ್ಕೆ: ನಿಡುಮಾಮಿಡಿ ಶ್ರೀ

ಚಿಕ್ಕಬಳ್ಳಾಪುರ: ಕನ್ನಡಪರ ಹೋರಾಟಗಳಿಗೆ ವಾಟಾಳ್ ನಾಗರಾಜ್ ನಿವೃತ್ತಿ ಹೇಳಿದ್ರೆ ಕನ್ನಡ ಉದ್ಧಾರವಾಗುತ್ತೆ ಅಂತ ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಜಚನಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ‘ಕನ್ನಡ ನಾಡು-ನುಡಿಯ ಜ್ವಲಂತ ಸಮಸ್ಯೆಗಳು ಒಂದು ಅವಲೋಕನ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸಕ್ತ ದಿನಗಳಲ್ಲಿ ಕನ್ನಡ ಹೋರಾಟಗಳೆಲ್ಲ ಕೇವಲ ಸ್ವಾರ್ಥಕ್ಕೆ ಬಳಕೆಯಾಗುತ್ತಿದೆ. ಜನಪರ ಹೋರಾಟಗಳೆಲ್ಲ ದಂಧೆಯಾಗಿ ಬದಲಾಗಿದೆ ಅಂತ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಕನ್ನಡವು ಆಡಳಿತ ಭಾಷೆಯಾಗಬೇಕು. ಈ ಸಂಬಂಧ ರಾಜ್ಯ ಸರ್ಕಾರ 160 ಸುತ್ತೋಲೆ ಹೊರಡಿಸಿದ್ದು, ಅವು ಕಾರ್ಯಗತಗೊಂಡಿಲ್ಲ. ಮಾತೃ ಭಾಷೆಯಲ್ಲೇ ಕಡ್ಡಾಯ ಪ್ರಾಥಮಿಕ ಶಿಕ್ಷಣ ಸಿಗಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ಆದೇಶ ಹೊರ ಬಿದ್ದಿಲ್ಲ. ಇದರಿಂದ ಬಡವರ ಮಕ್ಕಳಿಗೆ ಕನ್ನಡ, ಶ್ರೀಮಂತರ ಮಕ್ಕಳಿಗೆ ಇಂಗ್ಲೀಷ್, ಕಲಿಕಾ ಭಾಷೆಗಳಾಗುತ್ತಿವೆ. ಶಿಕ್ಷಣದಲ್ಲಿ ತಾರತಮ್ಯಕ್ಕೆ ಮಠಾಧೀಶರು ಮತ್ತು ರಾಜಕಾರಣಿಗಳು ಕೂಡ ಕಾರಣವಾಗಿದ್ದಾರೆ ಎಂದು ಕಿಡಿಕಾರಿದರು.

Leave a Reply

Your email address will not be published. Required fields are marked *