ವೆಡ್ಡಿಂಗ್ ವಿಡಿಯೋ ಶೂಟ್‌ ವೇಳೆ ದಂಪತಿಗೆ ಆದ ಅನುಭವವಾದ್ರು ಏನು..?

ವೆಡ್ಡಿಂಗ್ ವಿಡಿಯೋ ಶೂಟ್ ಅಂದ್ರೆ ಅದೊಂತರ ವಧು ವರರಿಗೆ ಸಂಭ್ರಮ. ತಮ್ಮ ಮದುವೆಯ ಪ್ರತಿಕ್ಷಣಗಳನ್ನ ದೃಶ್ಯಗಳಲ್ಲಿ, ಕ್ಯಾಮರಾದಲ್ಲಿ ಸೆರೆಹಿಡಿದು ಅದನ್ನ ತಮ್ಮ ಜೀವನದ ಸವಿನೆನಪಾಗಿಸಿಕೊಳ್ಳೋದು ಇತ್ತೀಚೆಗೆ ಕಾಮನ್ ಟ್ರೆಂಡ್‌ ಆಗ್ಬಿಟ್ಟಿದೆ. ವಿವಾಹದ ಬಳಿಕ ವಿಡಿಯೋ ಶೂಟ್‌ನಲ್ಲಿ ತೊಡಗಿದ್ದ ನವ ಜೋಡಿ ದೊಡ್ಡ ಅಪಾಯದಿಂದ ಪಾರಾಗಿವೆ. ನವದಂಪತಿಯೊಂದು ವಿಡಿಯೋ ಶೂಟ್‌ನಲ್ಲಿ ತೊಡಗಿದ್ದಾಗ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿದೆ. ಮರದ ಕೆಳಗೆ ಕೂತಿದ್ದ ನವ ವಿವಾಹಿತ ಜೋಡಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದೆ. ಈ ವಿಡಿಯೋವನ್ನ ಫ್ರೆಡ್ಡಿ ಹೆರ್ನಾಂಡೆಝ್ ಫೋಟೋಗ್ರಾಫಿ ಅಂಡ್ ಮೀಡಿಯಾ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ‘ನ್ಯೂಲಿ ವೆಡ್ಸ್‌ ನಿಯರ್ ಡೆತ್ ಎಕ್ಸ್‌ಪೀರಿಯನ್ಸ್‌’ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದೆ.
ಚೆಯೆನ್ನೆ ಮತ್ತು ಲುಕಾಸ್ ಜೋಡಿ ವಿವಾಹ ಮುಗಿದ ಬಳಿಕ ವಿಡಿಯೋಶೂಟ್‌ನಲ್ಲಿ ತೊಡಗಿದ್ದರು. ಆಗ ಅವರು ಒಂದು ಮರದ ಕೆಳಗೆ ಕೂತು ಮಾತನಾಡುತ್ತಾ ಕೂತಿರುವ ವಿಡಿಯೋ ಶೂಟ್ ಮಾಡಲಾಗುತ್ತಿತ್ತು. ಆಗ ಇದ್ದಕ್ಕಿದ್ದ ಹಾಗೆ ಮರದ ಬೃಹತ್ ಕೊಂಬೆ ಮುರಿದು ಬೀಳುವ ಸದ್ದು ಕೇಳುತ್ತದೆ. ತಕ್ಷಣ ಜೋಡಿ ಅಲ್ಲಿಂದ ಓಡಿ ಹೋಗಿ ಸ್ವಲ್ಪದರಲ್ಲೇ ಬಚಾವಾಗುತ್ತೆ. ನವ ವಿವಾಹಿತ ಜೋಡಿ ಅಪಾಯದಿಂದ ಪಾರಾದ ವಿಡಿಯೋ ವೈರಲ್‌ ಆಗಿದೆ. ಆದ್ರೆ ಇದು ಉದ್ದೇಶ ಪೂರಕವಾಗಿ ಮಾಡಿರುವ ಅನುಮಾನವೂ ಇದೆ.

Newly-wed's Near Death Experience

This couple's love will forever be stronger than that tree… wait for it… 😱🙈🤣All jokes aside, we had a great time shooting this beautiful couple's wedding. Here's a snapshot of their unforgettable day. More to come! #neardeathexperience #bloopers #whatthetree

Posted by Freddy Hernandez Photography & Media on Monday, July 2, 2018

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv