ಪ್ರೇಮ ವೈಫಲ್ಯ ನವವಿವಾಹಿತೆ ಆತ್ಮಹತ್ಯೆ

ರಾಮನಗರ: ಪ್ರೀತಿಸಿದ ಯುವಕ ಸಿಗಲಿಲ್ಲವೆಂದು ಮನನೊಂದು ನವವಿವಾಹಿತೆಯೊಬ್ಬಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಜಿಲ್ಲೆ ಶೆಟ್ಟಿಹಳ್ಳಿ ಬಳಿ ನಡೆದಿದೆ. ಕಾಂತಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದು ಈಕೆ ಮೂಲತಃ ಬೆಂಗಳೂರಿನ ಕೆ.ಆರ್‌.ಪುರಂ ನಿವಾಸಿಯಾಗಿದ್ದರು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚನ್ನಪಟ್ಟಣ ತಾಲೂಕಿನ ಶೆಟ್ಟಿ ಹಳ್ಳಿಗೆ ಆಕೆಯನ್ನು ಮದುವೆ ಮಾಡಿ ಕೊಡಲಾಗಿತ್ತು. ಆದ್ರೆ ಅದಾಗಲೇ ಆಕೆ ಪ್ರದೀಪ್ ಅನ್ನೋ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳೆನ್ನಲಾಗಿದೆ. ಪ್ರೀತಿಸಿದ ಯುವಕನನ್ನ ಮದುವೆಯಾಗಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಬೇಜಾರಾಗಿದ್ದ ಕಾಂತಲಕ್ಷ್ಮಿ, ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸ್ಥಳದಲ್ಲಿ ಕಾಂತ ಲಕ್ಷ್ಮಿ ಬರೆದಿಟ್ಟಿರೋ ಡೆತ್‌ ನೋಟ್ ಸಿಕ್ಕಿದ್ದು, ಈ ಸಂಬಂಧ ಚನ್ನಪಟ್ಟಣ ನಗರ ರೈಲ್ವೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *