ಮದುವೆ ದಿನವೇ ನವ ದಂಪತಿ ಮತದಾನ..!

ಧಾರವಾಡ: ಧಾರವಾಡದಲ್ಲಿ ಮದುವೆ ಸಂಭ್ರಮದ ನಡುವೆಯೂ ನವದಂಪತಿ ಮತದಾನ ಮಾಡಿದ್ದಾರೆ. ನಗರದ ಬೋವಿಗಲ್ಲಿ ನಿವಾಸಿ ಮೀನಾಜ್ ಸಯ್ಯದ್ ಮತದಾನ ಮಾಡಿದ್ದು, ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 44 ಮತಗಟ್ಟೆಯಾದ ಬಾಸೆಲ್ ಮಿಶನ್ ಸ್ಕೂಲ್ ನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿವಾಹ ಆರಕ್ಷತೆಗೂ ಮುನ್ನ ಮತಗಟ್ಟೆಗೆ ಆಗಮಿಸಿದ ವಧು ಮೀನಾಜ್ ಸೈಯದ್​ ಹಾಗೂ ವರ ಸಲಿಮ್ ಖಾಜಿ ಮತದಾನ ಮಾಡಿದರು. ಅಂದ್ಹಾಗೆ, ಮಾಳಾಪುರದ ಪಠಾಣ್ ಹಾಲ್ ನಲ್ಲಿ ಮದುವೆ ನಡೆಯಲಿದ್ದು ವಧು ಮೀನಾಜ್​ಗೆ ವರ ಸಲೀಮ್ ಖಾಜಿ ಹಾಗೂ ಕುಟುಂಬ ಸದಸ್ಯರು ಸಾಥ್ ನೀಡಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv