ಶಾಸಕ ಸ್ಥಾನದ ಪ್ರಮಾಣ ವಚನ ಸ್ವೀಕರಿಸಿದ ಡಾ.ಅವಿನಾಶ್ ಜಾಧವ್, ಕುಸುಮ ಶಿವಳ್ಳಿ

ಬೆಂಗಳೂರು: ಚಿಂಚೋಳಿ ಹಾಗೂ ಕುಂದಗೋಳ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಡಾ.ಅವಿನಾಶ್ ಜಾಧವ್ ಹಾಗೂ ಕುಸುಮಾ ಶಿವಳ್ಳಿ ಶಾಸಕ‌ ಸ್ಥಾನದ ಪ್ರಮಾಣವಚನ ಸ್ವೀಕರಿಸಿದರು. ಇಂದು ವಿಧಾನಸೌಧದಲ್ಲಿ ಡಾ.ಅವಿನಾಶ್ ಜಾಧವ್ ಹಾಗೂ ಕುಸುಮಾ ಶಿವಳ್ಳಿ ಪ್ರಮಾಣವಚನ ಪಡೆದುಕೊಂಡ್ರು. ವಿಧಾನಸಭೆಯ ಸ್ಪೀಕರ್ ರಮೇಶ್‌ಕುಮಾರ್, ಡಾ.ಅವಿನಾಶ್ ಜಾಧವ್ ಹಾಗೂ ಕುಸುಮಾ ಶಿವಳ್ಳಿಗೆ ಪ್ರಮಾಣವಚನ ಬೋಧಿಸಿದರು. ಡಾ.ಅವಿನಾಶ್ ಜಾಧವ್‌ಗೆ ಸಂಸದ ಡಾ.ಉಮೇಶ್ ಜಾಧವ್, ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಸಾಥ್ ನೀಡಿದ್ರು.

ಪತಿ ಶಿವಳ್ಳಿ ಅವರ ನಿಧನದದ ನಂತರ ತೆರವಾವಾಗಿದ್ದ ಕುಂದಗೋಳ ವಿಧಾನ ಸಭಾ ಕ್ಷೇತ್ರಕ್ಕೆ ಕುಸುಮಾ ಆಯ್ಕೆಯಾಗಿದ್ದಾರೆ. ಪ್ರಮಾಣ ವಚನ ಬೋಧಿಸಿದ ಬಳಿಕ ಸ್ಪೀಕರ್ ರಮೇಶ್ ಕುಮಾರ್, ರಾಜಕೀಯವಾಗಿ ಏನೇ ಸಲಹೆಗಳು ಬೇಕಾದರೂ ಕೇಳಮ್ಮ ನಾವು ಸಲಹೆ ನೀಡುತ್ತೇವೆ ಅಂತಾ ಕುಸುಮಾ ಅವರಿಗೆ ಹೇಳಿದರು. ಇದೇ ವೇಳೆ, ‘ನೀನು ಇನ್ನೂ ಓದಬೇಕು. ಈಗಲೇ ರಾಜಕೀಯದ ಬಗ್ಗೆ ತಲೆ ಕೆಡೆಸಿಕೊಳ್ಳಬಾರದು’ ಅಂತಾ ಶಿವಳ್ಳಿ ಮಗನಿಗೆ ರಮೇಶ್ ಕುಮಾರ್ ಬುದ್ಧಿವಾದ ಹೇಳಿದರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv