ಜೀವಂತ ನವಜಾತ ಶಿಶುವನ್ನ ಮಣ್ಣಲ್ಲಿ ಹೂತಿಟ್ಟಿದ್ರಲ್ಲೋ ಪಾಪಿಗಳಾ..!

ಚಿಕ್ಕಬಳ್ಳಾಪುರ: ಚಿಂತಾಮಣಿ ತಾಲೂಕಿನ ಗಡದಾಸನಹಳ್ಳಿಯಲ್ಲಿ ನವಜಾತ ಶಿಶುವನ್ನು ಹೂತಿಟ್ಟ ಅಮಾನವೀಯ ಘಟನೆ ನಡೆದಿದೆ. ಗ್ರಾಮದ ರೈತರೊಬ್ಬರ ರೇಷ್ಮೆ ತೋಟದಲ್ಲಿ ನವಜಾತ ಶಿಶುವನ್ನು ಜೀವಂತವಾಗಿ ಹೂತಿಟ್ಟು ಪಾಪಿಗಳು ಕ್ರೌರ್ಯ ಮೆರೆದಿದ್ದಾರೆ. ರತ್ನಾ ಎಂಬುವರು ಇಂದು ಮುಂಜಾನೆ 6 ಗಂಟೆಗೆ ತೋಟದಲ್ಲಿ ಕೆಲಸಕ್ಕೆಂದು ಹೋದಾಗ ಮಗುವಿನ ಚೀರಾಟ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡಿದಾಗ ಮಣ್ಣಿನಲ್ಲಿ ಶಿಶುವಿನ ಅರ್ಧ ದೇಹವನ್ನು ಹೂತಿಟ್ಟಿರುವುದು ಪತ್ತೆಯಾಗಿದೆ.

ಕೂಡಲೆ ಅಸ್ವಸ್ಥ ಶಿಶುವನ್ನು ಕುರುಬೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಸ್ಥಳೀಯ ಅಂಗನವಾಡಿಯಲ್ಲಿ ಗರ್ಭಿಣಿಯರ ಮಾಹಿತಿ ಪಡೆದು ತನಿಖೆ ಶುರುಮಾಡಿದ್ದಾರೆ.

Leave a Reply

Your email address will not be published. Required fields are marked *