ಪಾಲಿಕೆ ವಿರುದ್ಧ ಶಾಸಕ ಜ್ಯೋತಿಗಣೇಶ್​ ಅಸಮಾಧಾನ

ತುಮಕೂರು: ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸದ ಮಹಾನಗರ ಪಾಲಿಕೆ ಅಧಿಕಾರಿಗಳ ವಿರುದ್ಧ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್​​ ಅಸಮಾಧಾನಗೊಂಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜ್ಯೋತಿಗಣೇಶ್​​, ನಗರದಲ್ಲಿ ಕುಡಿಯುವ ನೀರಿಗಾಗಿ ನೂತನ ಕೊಳವೆ ಬಾವಿ ಕೊರೆಯಲು ₹2 ಕೋಟಿ ಹಣ ಬಂದಿದೆ. ಇದರಲ್ಲಿ ಮಹಾನಗರ ಪಾಲಿಕೆ ಕೊಳವೆ ಬಾವಿಗಳ ದುರಸ್ತಿ ಕೂಡ ಸೇರಿದೆ. ಅಲ್ಲದೇ ಚೆನ್ನಾಗಿರುವ ಮೋಟಾರ್​​ ಪಂಪ್​ಗಳನ್ನು ದುರಸ್ತಿಯ ನೆಪ ಒಡ್ಡಿ ಬದಲಾಯಿಸುವ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಇದನ್ನು ಸದಸ್ಯರ ಗಮನಕ್ಕೆ ತಂದರೂ ಹೊಸ ಕೊಳವೆ ಬಾವಿ ಕೊರೆಸಲು ಪಾಲಿಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಹೇಳಿದ್ರು.

ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಕಾರಣ ಪಾಲಿಕೆ ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ ಎಂದು ಶಾಸಕ ಜ್ಯೋತಿಗಣೇಶ್​​ ಆರೋಪಿದರು. ಇನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಬೇಕು. ಇಲ್ಲವಾದರೆ ಜನ ಹಾಗೂ ಜನಪ್ರತಿನಿಧಿಗಳ ಕೋಪಕ್ಕೆ ಪಾಲಿಕೆಯ ಅಧಿಕಾರಿಗಳು ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv