ಜರ್ಮನಿಯ ಸ್ಪೈ ಮುಖ್ಯ ಕಚೇರಿ ಅದೆಷ್ಟು ದೊಡ್ಡದಿದೆ ಅಂದ್ರೆ..!

ಪ್ರತಿಯೊಂದು ದೇಶವೂ ತನ್ನ ಭದ್ರತೆಗಾಗಿ ಗುಪ್ತಚರ ಇಲಾಖೆಯನ್ನು ಹೊಂದಿರುತ್ತೆ. ಅದರ ನಿರ್ವಹಣೆಗಾಗಿ ಕೋಟಿ ಕೋಟಿ ಹಣ ಮೀಸಲಿಡುತ್ತೆ. ಯಾಕೆಂದರೆ ದೇಶದ ಭದ್ರತಾ ದೃಷ್ಟಿಯಿಂದ ಗುಪ್ತಚರ ಇಲಾಖೆಯನ್ನ ಹೆಚ್ಚು ಸಧೃಡವಾಗಿಡುವುದು ಆಯಾ ದೇಶದ ಕರ್ತವ್ಯ. ಹೀಗಾಗಿಯೇ ಜರ್ಮನ್​ ಸರ್ಕಾರ ಭದ್ರತೆಗಾಗಿ ಭರ್ಜರಿ ಕೋಟೆಯನ್ನೇ ಕಟ್ಟಿದೆ.

ಜರ್ಮನ್ ಸ್ಪೈನ ಹೆಡ್​ಕ್ವಾರ್ಟರ್ಸ್ ಅನ್ನ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. 8 ಕೋಟಿ 4 ಲಕ್ಷ ರೂಪಾಯಿ ಖರ್ಚು ಮಾಡಿ, ನೂತನ ಕಟ್ಟಡವನ್ನ ನಿರ್ಮಿಸಲಾಗಿದ್ದು, ಇದಕ್ಕಾಗಿ ಬಳಕೆಯಾಗಿರುವ ಸ್ಥಳದಲ್ಲಿ ಬರೊಬ್ಬರಿ 36 ಫುಟ್​ಬಾಲ್ ಮೈದಾನಗಳನ್ನೇ ನಿರ್ಮಿಸಬಹುದು. ಮ್ಯೂನಿಚ್​ ಹೊರವಲಯದ ಪುಲಾಚ್ ಎಂಬಲ್ಲಿದ್ದ ಗುಪ್ತಚರ ಮುಖ್ಯ ಕಾರ್ಯಾಲಯವನ್ನ ಈಗ ಬರ್ಲಿನ್​ನ ಹಾರ್ಟ್ ಆಫ್ ದ ಸಿಟಿಯಲ್ಲಿ ಹೊಸ ಕಟ್ಟಡ ನಿರ್ಮಿಸಲಾಗಿದೆ.
ಈ ಬೃಹತ್ ಕಟ್ಟಡದಲ್ಲಿ ಗೂಢಚಾರಿಗಳು ಇತರೆ ಸಿಬ್ಬಂದಿ ಸೇರಿದಂತೆ 4 ಸಾವಿರಕ್ಕೂ ಹೆಚ್ಚು ಜನ ಕಾರ್ಯ ನಿರ್ವಹಿಸಲಿದ್ದಾರೆ. ಫೆಬ್ರವರಿ 8ರಂದು ಜರ್ಮನ್ ಚಾನ್ಸಲರ್ ಌಂಜೆಲಾ ಮಾರ್ಕೆಲ್ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಿದ್ದು, ಈಗಾಗಲೇ ಕಾರ್ಯಾರಂಭ ಮಾಡಿದೆ.


Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv