ತವರಿಗೆ ನೂತನ ಸಚಿವರ ಆಗಮನ: ಸೆಲ್ಫಿ ಕ್ಲಿಕ್ಕಿಸಿ‌, ಸಂಭ್ರಮಿಸಿದ ಬೆಂಬಲಿಗರು..!

ದಕ್ಷಿಣ ಕನ್ನಡ: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ‌ ಸರ್ಕಾದಲ್ಲಿ ನಗರಾಭಿವೃದ್ಧಿ ಹಾಗೂ ವಸತಿ ಸಚಿವರಾಗಿ ಅಧಿಕಾರ‌ ಸ್ವೀಕರಿಸಿ ತವರು ಜಿಲ್ಲೆಗೆ‌ ಆಗಮಿಸಿದ‌ ನೂತನ ಸಚಿವ ಯು.ಟಿ.‌ಖಾದರ್​ಗೆ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ಕೋರಿದರು. ಮಂಗಳೂರು ವಿಮಾನ‌‌ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ನಿಂದ ಇಳಿದ ಖಾದರ್ ಅವರನ್ನು ಮೊದಲು ವಿಮಾನ‌ ನಿಲ್ದಾಣದ ಸಿಬ್ಬಂದಿ‌ಯೂ ಸ್ವಾಗತಿಸಿದರು.

ಬಳಿಕ ಕಾಂಗ್ರೆಸ್ ಮುಖಂಡರು ಹೂಗುಚ್ಛ ನೀಡಿ ಬರಮಾಡಿಕೊಂಡರು. ನಂತರ ಮಂಗಳೂರು ನಗರದ ಕಾವೂರು ಹಾಗೂ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದ‌ ಬಳಿ ಕಾಂಗ್ರೆಸ್ ಕಾರ್ಯಕರ್ತರು ಸಚಿವರನ್ನು ಘೋಷಣೆಯೊಂದಿಗೆ ಭರ್ಜರಿಯಾಗೇ ಸ್ವಾಗತಿದಲ್ಲದೇ, ಸಿಹಿ‌ ತಿಂಡಿ‌‌ ಹಂಚಿ‌ ಸಂಭ್ರಮಿಸಿದರು.‌ ಈ ನಡುವೆ ಕೆಲವು ಕಾರ್ಯಕರ್ತರು ಸಚಿವ ಖಾದರ್ ಜತೆ ಸೆಲ್ಫಿ ಕ್ಲಿಕ್ಕಿಸಿ‌ ಸಂತೋಷಪಟ್ಟರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv