ಹೆಣ್ಣು ಮಗುವೆಂಬ ಕಾರಣಕ್ಕೆ ಹಸುಗೂಸನ್ನೇ ಕೊಂದ ಪಾಪಿ ತಂದೆ

ಬೆಂಗಳೂರು: ಹೆಣ್ಣು ಮಗು ಜನಿಸಿತ್ತೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ಹೆತ್ತ ಮಗಳನ್ನೇ ಗೋಡೆಗೆ ಗುದ್ದಿ ಗುದ್ದಿ ಕೊಲೆ ಮಾಡಿರುವ ಪೈಶಾಚಿಕ ಘಟನೆ ಬೆಂಗಳೂರಿನ ಸುಬ್ಬನಪಾಳ್ಯದಲ್ಲಿ ನಿನ್ನೆ ರಾತ್ರಿ ನಡೆದಿದೆ. ಸ್ವಿಮ್ಮಿಂಗ್ ಪೂಲ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿ ಗೋಕುಲ್​ ತನ್ನ 20ದಿನದ ಹಸುಗೂಸನ್ನ ಅಮಾನವೀಯ ರೀತಿಯಲ್ಲಿ ಕೊಲೆ ಮಾಡಿದ್ದಾನೆ. ನೇಪಾಳ ಮೂಲದ ಈತ ತನ್ನ ಹೆಂಡತಿಯೊಂದಿಗೆ ಬಂದು ಬೆಂಗಳೂರಿನಲ್ಲಿ ನೆಲಸಿದ್ದ. ಈ ಕುರಿತು ಗೋಕುಲ್​ ಹೆಂಡತಿ ತನ್ನ ಗಂಡನ ವಿರುದ್ಧ ದೂರು ದಾಖಲಸಿದ್ದು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನಿಗೆ ಹೆಣ್ಣು ಮಕ್ಕಳೆಂದರೆ ಮೊದಲಿಂದಲೂ ಆಗಿಬರುತ್ತಿರಲಿಲ್ಲ. ಆದ್ರಿಂದ ತನ್ನ ಹೆಂಡತಿಗೆ ನಿತ್ಯವೂ ಕಿರುಕುಳ ನೀಡುತಿದ್ದ. ಅಲ್ಲದೇ ತನ್ನ ಹೆಂಡತಿಗೆ ಹೆಣ್ಣುಮಗೂ ಜನಿಸಿದ ಮೇಲಂತೂ ಈತನಿಂದ ಕಿರುಕುಳ ಜಾಸ್ತಿಯಾಗಿತ್ತೆಂದು ಆರೋಪಿ ಪತ್ನಿ ದೂರಿನಲ್ಲಿ ತಿಳಿಸಿದ್ದಾಳೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv