ಕೊಲಂಬೋದಲ್ಲಿ ಹೊಸದಾಗಿ ಮತ್ತೊಂದು ಬಾಂಬ್​ ಸ್ಫೋಟ, ಮೂವರ ಸಾವು

ಕೊಲಂಬೊ: ಈಗಾಗಲೇ ಸರಣಿ ಬಾಂಬ್​ ಸ್ಫೋಟಗಳಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಇದೀಗತಾನೇ ಮತ್ತೊಂದು ಸ್ಫೋಟ ಆಗಿದೆ. ಕೊಲಂಬೋದಲ್ಲಿ ಹೊಸದಾಗಿ ಭಾರೀ ಬಾಂಬ್​ ಸ್ಫೋಟ ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ. ಇದು ಆತ್ಮಾಹುತಿ ಬಾಂಬ್​ ದಾಳಿ ಎಂದು ತಿಳಿದುಬಂದಿದೆ. ತಾಜಾ ಘಟನೆಯಿಂದ ಇಡೀ ಶ್ರೀಲಂಕಾ ಮತ್ತೊಮ್ಮೆ ಬೆಚ್ಚಿಬಿದ್ದಿದೆ. ಮತ್ತೊಂದು ಸ್ಫೋಟದಿಂದ ಬಸವಳಿದಿರುವ ಶ್ರೀಲಂಕಾದ ರಕ್ಷಣಾ ಸಚಿವರು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನಿರ್ದಿಷ್ಟಾವಧಿ ಕರ್ಫ್ಯೂ ಘೋಷಿಸಿದ್ದಾರೆ. ಜೊತೆಗೆ ತಾತ್ಕಾಲಿಕವಾಗಿ ಸಾಮಾಜಿಕ ಜಾಲತಾಣಗಳನ್ನು ಬಂದ್​ ಮಾಡಿದ್ದಾರೆ.

ಬೆಳಗ್ಗೆಯಿಂದ 8ನೆಯ ಸ್ಫೋಟ:
ಚರ್ಚ್​​ಗಳು ಮತ್ತು ಪಂಚತಾರಾ ಹೋಟೆಲ್​​ಗಳಲ್ಲಿ ಹಬ್ಬದ ಸಂದರ್ಭಲ್ಲಿ ಬೆಳಗ್ಗೆಯಿಂದ ಸರಣಿ ಸ್ಫೋಟಗಳು ಸಂಭವಿಸಿದ್ದು, ಇದೀಗ ಮತ್ತೊಂದು ಹೋಟೆಲ್​​ನಲ್ಲಿ  ಭಾರೀ ಬಾಂಬ್​ ಸ್ಫೋಟ ಆಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.