99ರ ವಯಸ್ಸಿನಲ್ಲಿ ಮತ್ತೆ ಶಾಲೆಗೆ ಹೋಗ್ತಿದ್ದಾರೆ ಅಜ್ಜಿ..!

ಓದಿಗೆ ಏಜ್ ಲಿಮಿಟ್ ಇಲ್ಲ ಅನ್ನೋದಕ್ಕೆ ಇದೇ ಎಕ್ಸಾಂಪಲ್​​​. ಓದುವ ಪ್ರೀತಿಯಿಂದ 99 ವರ್ಷದ ಇಳಿವಯಸ್ಸಿನ ಅಜ್ಜಿ ಯೂಸೆಬಿಯಾ ಎಂಬುವವರು ಯಾವ ಮಕ್ಕಳಿಗೂ ಕಮ್ಮಿ ಇಲ್ಲ ಅನ್ನೋ ಥರ ಶಾಲೆಗೆ ಹೋಗ್ತಿದ್ದಾರೆ. ಇಳಿವಯಸ್ಸಿನಲ್ಲೂ ಶಿಕ್ಷಣ ಪಡೆಯುವುದರ ಮೂಲಕ ಈಗ ಈ ಅಜ್ಜಿ ಸುದ್ದಿಯಾಗಿದ್ದಾರೆ. 99ನೇ ವಯಸ್ಸಿನಲ್ಲೂ ಅವರು ಶಾಲೆಗೆ ಹೋಗುವ   ನಿರ್ಧಾರ ತೆಗೆದುಕೊಂಡ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಶಂಸೆ ವ್ಯಕ್ತವಾಗಿದ್ದು, ಅಜ್ಜಿ ಹಲವು ಮಂದಿಯ ಹೃದಯ ಗೆದ್ದಿದ್ದಾರೆ.

ಅರ್ಜೆಂಟೀನಾ ಮೂಲದವರಾದ ಯೂಸೆಬಿಯಾ, ಕುಟುಂಬದ ಸಮಸ್ಯೆಯಿಂದಾಗಿ ಹಾಗೂ ತಾಯಿ ನಿಧನದ ಬಳಿಕ ಚಿಕ್ಕ ವಯಸ್ಸಿನಲ್ಲೇ ಶಾಲೆ ಹೋಗುವುದನ್ನು ಬಿಟ್ಟಿದ್ದರು. ಈಗ ತಮ್ಮ 98ನೇ ವಯಸ್ಸಿನಲ್ಲಿ ಮತ್ತೆ ಅವರು ಶಾಲೆಗೆ ಹೋಗಲು ನಿರ್ಧರಿಸಿದರು. ಆದ್ರೆ ಅವರು ತೆಗೆದುಕೊಂಡ ಈ ನಿರ್ಧಾರ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿತ್ತು. ಅಲ್ದೇ, ಇವರ ಉತ್ಸಾಹ ಕಂಡು ಪ್ರತಿಯೊಬ್ಬರು ಸಂತೋಷ ವ್ಯಕ್ತಪಡಿಸಿದ್ದಾರೆ. ಸದ್ಯ ಲ್ಯಾಪ್ರಿಡಾದ ಪ್ರೈಮರಿ ಸ್ಕೂಲ್‌ನಲ್ಲಿ ಯೂಸೆಬಿಯಾ ತಮ್ಮ ಶಿಕ್ಷಣ ಮುಂದುವರಿಸಿದ್ದಾರೆ.

ವರದಿ ಪ್ರಕಾರ, ಯೂಸೆಬಿಯಾ 98ನೇ ವಯಸ್ಸಿನಲ್ಲಿ ತಮ್ಮ ಶಿಕ್ಷಣವನ್ನು ಆರಂಭಿಸುವ ನಿರ್ಧಾರ ಕೈಗೊಂಡರು. ಅಂದಿನಿಂದ,ಇಂದಿನವರೆಗೂ ಅವರು ಒಂದು ದಿನವೂ ಶಾಲೆ ಮಿಸ್‌ ಮಾಡಿಲ್ಲ. ಪ್ರತಿ ಮಂಗಳವಾರ, ಬುಧುವಾರ, ಗುರುವಾರದಂದು ಯೂಸೆಬಿಯಾ ಅವರ ಶಿಕ್ಷಕರಾದ ಪ್ಯಾಟ್ರಿಸಿಯಾ ಇವರನ್ನ  ಶಾಲೆಗೆ ಕರೆದ್ಯೂಯುತ್ತಾರೆ. ವಯಸ್ಸಾಗುತ್ತಿದ್ದಂತೆ ಜ್ಞಾಪಕಶಕ್ತಿ ಅಷ್ಟಾಗಿ ಇರುವುದಿಲ್ಲ. ಆದ್ರೆ ನಾನು ಪ್ರತಿಯೊಂದು ಶೆಡ್ಯೂಲ್ ಚೆನ್ನಾಗಿ ಮಾಡ್ತಿದ್ದೆ. ನಾನು ಇಲ್ಲಿಗೆ ಬಂದಾಗ ಬರೆಯುವುದು, ಓದುವುದು ಹೇಗೆ? ಅನ್ನೋದನ್ನೂ ಮರೆತಿದ್ದೆ ಎಂದು ಯೂಸೆಬಿಯಾ ತಿಳಿಸಿದ್ದಾರೆ.

ಆದ್ರೆ ಈಗ ಅವರು ಚೆನ್ನಾಗಿ ಓದಬಲ್ಲರು ಹಾಗೂ ಬರೆಯಬಲ್ಲರಂತೆ. ಅಷ್ಟೇ ಅಲ್ಲದೇ ಕಂಪ್ಯೂಟರ್‌ ಬಳಕೆಯನ್ನೂ ಕಲಿಯುತ್ತಿದ್ದಾರೆ , ಕಂಪ್ಯೂಟರ್ ಕಲಿಕೆ ಬಗ್ಗೆ ತುಂಬಾ ಉತ್ಸಾಹ ಹಾಗೂ ಕುತೂಹಲ ಹೊಂದಿದ್ದಾರೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv